'ಇಂಡಿಯಾ' ಪದ ಬಳಕೆಗೆ ನಿಷೇದ ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ
Published by Basavaraj Halli
02 ಜೂನ್ 2020
ನವದೆಹಲಿ: ಮುಘಲ್ ದೊರೆಗಳ ಆಡಳಿತದಲ್ಲಿ ಹಿಂದೂಸ್ಥಾನವಾಗಿದ್ದ ನಮ್ಮ ದೇಶವು, ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ 'ಇಂಡಿಯಾ' ಆಗಿ ಬದಲಾಗಿದೆ. ಕಾರಣ ಇಂಡಿಯಾ ಪದದ ಬಳಕೆ ಬೇಡ ಅದರ ಬದಲಾಗಿ "ಭಾರತ" ಅಥವಾ "ಹಿಂದುಸ್ತಾನ" ಬಳಕೆ ಸೂಕ್ತ ಎಂದು ದೆಹಲಿಯ ನಮಃ ಎಂಬುವವರು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಭಾರತೀಯ ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ 'ಇಂಡಿಯಾ' ಎಂಬ ಹೆಸರನ್ನು 'ಭಾರತ' ಅಥವಾ 'ಹಿಂದೂಸ್ಥಾನ' ಎಂದು ಬದಲಾಯಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದೂಡಿದೆ.