ಸ್ವದೇಶಿ ನಿರ್ವಿುತ ತೇಜಸ್ ಯುದ್ಧ ವಿಮಾನದ ಎರಡನೇ ಸ್ಕ್ವಾಡ್ರನ್ ಬುಧವಾರ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಗೊಂಡಿದೆ. ಮತ್ತೆ ಪುನಾರಂಭವಾದ ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ವಾಯುನೆಲೆಯಲ್ಲಿ ವಾಯುಪಡೆ ಮುಖ್ಯಸ್ಥ ಆರ್.ಕೆ. ಎಸ್ ಭದೌರಿಯಾ ಅವರು ತೇಜಸ್ ಯುದ್ಧ ವಿಮಾನಗಳನ್ನು ಚಲಾಯಿಸುವುದರ ಮೂಲಕ ಸೇವೆಗೆ ಚಾಲನೆ ನೀಡಿದರು. ಈ ಯುದ್ಧ ವಿಮಾನಗಳ ವಿನ್ಯಾಸವನ್ನು ಏರೋನಾಟಿಕಲ್‌ ಡೆವಲಪ್‌ಮೆಂಟ್‌ ಏಜೆನ್ಸಿ (ಎಡಿಎ) ರೂಪಿಸಿದ್ದು, ಬೆಂಗಳೂರು ಮೂಲದ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಲ್ಲಿ ತಯಾರಿಸಲಾಗಿದೆ. ಎಲ್‌ಸಿಎ ತೇಜಸ್ ವಿಶೇಷತೆ : – ಸಿಂಗಲ್‌ ಎಂಜಿನ್‌, ಡೆಲ್ಟಾ ವಿಂಗ್‌, 4ನೇ ತಲೆಮಾರಿನ ಫೈಟರ್‌ ಜೆಟ್ – 6,560 ಕಿಲೋ ತೂಕ – 15ಕಿ.ಮೀ. ಎತ್ತರದವರೆಗೆ ಹಾರಾಟ – 13.2 ಮೀಟರ್‌ ಉದ್ದ – 8.20ಮೀಟರ್‌ ರೆಕ್ಕೆಯ ಉದ್ದ