ಅಲ್ಜೇರಿಯಾದ ಸಹಾರನ್ ಚಿರತೆ
Published by Basavaraj Halli
28 ಮೇ 2020
ಕಳೆದ ಒಂದು ದಶಕದಲ್ಲಿ ಮೊದಲ ಬಾರಿಗೆ, ಪರಿಸರವಾದಿಗಳು ಅಲ್ಜೇರಿಯಾದ ಹೊಗ್ಗರ್ ಪರ್ವತಗಳ ರಾಷ್ಟ್ರೀಯ ಉದ್ಯಾನವನದಲ್ಲಿ ಸಹಾರನ್ ಚಿರತೆಯನ್ನು ಚಿತ್ರೀಕರಿಸಿದ್ದಾರೆ.
ಸಹಾರನ್ ಚಿರತೆ ಕುರಿತು :
ಸಹಾರನ್ ಚಿರತೆ (ಝೋಯೋಲೋಜಿಕಲ್ ಹೆಸರು: ಅಸಿನೋನಿಕ್ಸ್ ಜುಬಾಟಸ್ ಹೆಕ್ಕಿ) ಅಥವಾ ವಾಯುವ್ಯ ಆಫ್ರಿಕಾದ ಚಿರತೆ ಎಂಬುದು ಚಿರತೆಯ ಒಂದು ಉಪಜಾತಿಯಾಗಿದೆ. ಸಹಾರಾ ಮತ್ತು ಆಫ್ರಿಕಾದ ಸಹೇಲ್ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಇವುಗಳು ಕಂಡುಬರುತ್ತವೆಯಾದರು, ಪ್ರಸ್ತುತ ಈ ಜೀವಿಗಳು ಅಳಿವಿನಂಚಿನಲ್ಲಿರುವ ಪ್ರಾಣಿಯಾಗಿದ್ದು, 2008 ರಲ್ಲಿ ಇವುಗಳ ಒಟ್ಟು ಸಂಖ್ಯೆಯು 250 ಕ್ಕಿಂತ ಕಡಿಮೆ ಎಂದು ಅಂದಾಜಿಸಲಾಗಿತ್ತು.
* ಇವುಗಳ ಪ್ರಮುಖವಾಗಿ ಅಲ್ಜೀರಿಯಾ, ಚಾಡ್, ಮಾಲಿ, ಬೆನಿನ್, ಬುರ್ಕಿನಾ ಫಾಸೊ ಮತ್ತು ನೈಜರ್ ದೇಶಗಳ ಕಾಡಿನಲ್ಲಿ ಕಂಡುಬರುತ್ತವೆ.