ಪೊಲೀಸ್ ಪೇದೆ ಪದ ಬಳಸದಂತೆ ಕರ್ನಾಟಕ ಪೊಲೀಸ್ ಇಲಾಖೆ ಮಹತ್ವದ ಆದೇಶ
Published by Basavaraj Halli
25 ಮೇ 2020
ಬೆಂಗಳೂರು : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಇನ್ನುಮುಂದೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಪೇದೆಗಳಿಗೆ ಪೇದೆ ಬದಲಾಗಿ ಕಾನ್ಸ್ಟೇಬಲ್ ಎಂದು ಕರೆಯುವಂತೆ ಮಹತ್ವದ ಆದೇಶವೊಂದನ್ನು ಹೊರಡಿಸಿದೆ.
ಇಲಾಖೆಯ ಶ್ರೇಣಿವಾರು ಹುದ್ದೆಯ ಹೆಸರಿನಲ್ಲಿ ಬದಲಾವಣೆ ಮಾಡಲಾಗಿದ್ದು, ಮುಂದೆ 'ಪೊಲೀಸ್ ಪೇದೆ' ಅನ್ನುವಂತಿಲ್ಲ ಬದಲಿಗೆ ಪೊಲೀಸ್ ಕಾನ್ಸ್ಟೇಬಲ್ ಎಂದು ಕರೆಯಬೇಕು.
* ಇನ್ನು ಮುಂದೆ ಪೇದೆಗಳನ್ನು ಕಾನ್ಸ್‌ಟೇಬಲ್, ಮುಖ್ಯ ಪೇದೆಯನ್ನು ಹೆಡ್ ಕಾನ್ಸ್‌ಟೇಬಲ್ ಎಂದು ಕರೆಯಬೇಕು. ಬರವಣಿಗೆಯಲ್ಲಿಯೂ ಸಹ ಇದೇ ಪದಗಳನ್ನು ಬಳಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
* ರಾಜ್ಯದ ನಾಗರಿಕರಿಗೆ ಎಲ್ಲ ರೀತಿಯ ಸೇವೆಗಳನ್ನು ನೀಡುವ ಇವರಿಗೆ "ಪೇದೆ" ಎಂಬ ಪದದ ಉಪಯೋಗ ಅಷ್ಟು ಸಮಂಜಸವಾಗಿರುವುದಿಲ್ಲ ಆದ್ದರಿಂದ ಈ ಪದದ ಬಳಕೆ ಕೈಬಿಡಲು ಆದೇಶದಲ್ಲಿ ತಿಳಿಸಲಾಗಿದೆ.