ಮೇ 25 : ದಿಟ್ಟ ಕ್ರಾಂತಿಕಾರಿ ರಾಸ್ ಬಿಹಾರಿ ಬೋಸ್ ಜಯಂತಿ
Published by Basavaraj Halli
25 ಮೇ 2020
ಬಂಗಾಲ ಪ್ರಾಂತದ ಬರ್ಧಮಾನ್ ಜಿಲ್ಲೆಗೆ ಸೇರಿದ ಸುಬಲ್ ದಾಹ ಎಂಬ ಹಳ್ಳಿಯಲ್ಲಿ ರಾಸ್ ಬಿಹಾರಿ ಬೊಸ್ ಅವರು ಜನಿಸಿದರು. ತಂದೆ ವಿನೋದ್ ಬಿಹಾರಿ ಬೋಸ್ ಮತ್ತು ತಾಯಿ ಭುವನೇಶ್ವರಿ.
* ಭಾರತ ಸ್ವಾತಂತ್ರ್ಯ ದೊರಕಿಸಲು 'ಭಾರತ ರಾಷ್ಟ್ರೀಯ ಸೈನ್ಯ'ವನ್ನು ಕಟ್ಟಿದರು, ಮತ್ತು ಹಲವು ರಾಸಾಯನಿಕ ಉಪಯೋಗಿಸಿ ಬಾಂಬ್ ತಯಾರಿಸುವುದನ್ನು ಕರಗತ ಮಾಡಿಕೊಂಡಿದ್ದರು.
* 1924ರಲ್ಲಿ ಟೋಕಿಯೋ ನಗರದಲ್ಲಿ 'ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್' ಪ್ರಾರಂಭಿಸಿದರು. ಹಾಗು ಏಷ್ಯಾದ ದೇಶಗಳ ಸ್ವಾತಂತ್ರ್ಯಕ್ಕಾಗಿ 'ಫ್ರಾನ್ಸ್ ಏಷ್ಯಾ ಲೀಗ್'ನ್ನು ಆರಂಭಿಸಿದ್ದರು.
* ಬೋಸ್ 1945 ಜನವರಿ 24ರಂದು ಟೋಕಿಯೋ ನಗರದಲ್ಲಿ ಹೃದಯಾಘಾತದಿಂದ ವಿಧಿವಶರಾದರು.