ನ್ಯೂಯಾರ್ಕ್‌: ಜಪಾನ್ ರಾಷ್ಟ್ರದ ಮಹಿಳಾ ಟೆನಿಸ್‌ ತಾರೆಯಾದ ನವೊಮಿ ಒಸಾಕಾ ಅವರು ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಿಳಾ ಕ್ರೀಡಾಪಟು ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಕಳೆದ 12 ತಿಂಗಳುಗಳಲ್ಲಿ ಅವರ ಒಟ್ಟು ₹ 284 ಕೋಟಿಗಿಂತ ಅಧಿಕ ಸಂಪಾದಿಸಿದ್ದಾರೆ ಎಂದು ಫೋರ್ಬ್ಸ್‌ ನಿಯತಕಾಲಿಕೆ ವರದಿ ಮಾಡಿದೆ. * 22 ವರ್ಷದ ಒಸಾಕಾ ಅವರು ಅಮೆರಿಕದ ಸೆರೆನಾ ವಿಲಿಯಮ್ಸ್‌ (₹ 273 ಕೋಟಿ) ಅವರನ್ನು ಹಿಂದಿಕ್ಕಿ ಈ ಸ್ಥಾನ ಗಳಿಸಿದ್ದಾರೆ. * ಅತಿ ಹೆಚ್ಚು ಸಂಭಾವನೆ ಪಡೆಯುವ ವಿಶ್ವದ ಅಗ್ರ 100 ಕ್ರೀಡಾಪಟುಗಳ ಪಟ್ಟಿಯಲ್ಲಿ ಒಸಾಕಾ 29ನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಸೆರೆನಾ ಅವರ ಸ್ಥಾನ 33ನೆಯದ್ದು.