ಇಸ್ರೋದ 'ಗಗನಯಾನ' ಯೋಜನೆ ನಾಲ್ವರು ಭಾರತೀಯ ಗಗನಯಾತ್ರಿಗಳಿಗೆ ರಷ್ಯಾದಲ್ಲಿ ತರಬೇತಿ
Published by Basavaraj Halli
24 ಮೇ 2020
ಬೆಂಗಳೂರು :ಭಾರತೀಯ ಇಸ್ರೋ ಆರಂಭಿಸಲಿರುವ ಪ್ರಪ್ರಥಮ ಮಾನವಸಹಿತ ಅಂತರಿಕ್ಷ ಯಾನವಾದ 'ಗಗನಯಾನ'ಕ್ಕಾಗಿ ಈಗಾಗಲೇ ನಾಲ್ಕು ಗಗನಯಾತ್ರಿಗಳನ್ನು ಭಾರತದ ವಾಯುಪಡೆಯಿಂದ ಆಯ್ಕೆ ಮಾಡಲಾಗಿದ್ದು, ಈ ನಾಲ್ವರು ಗಗನಯಾತ್ರಿಗಳಿಗೆ ರಷ್ಯಾದಲ್ಲಿ ಪುನರಾರಂಭಗೊಂಡಿದೆ.
ಈ ತರಬೇತಿ ಈಗಾಗಲೇ 2020 ರ, ಫೆ.20ರಿಂದ ಆರಂಭವಾಗಿತ್ತಾದರೂ ಕೋರೋಣ ಸೋಂಕಿನ ಭೀತಿಯಿಂದಾಗಿ ಅದನ್ನು ನಿಲ್ಲಿಸಲಾಗಿತ್ತು.
* ಭಾರತೀಯ ವಾಯುಪಡೆಯ ನಾಲ್ವು ಯುದ್ಧವಿಮಾನ ಪೈಲಟ್‌ಗಳು ಗಗಾರಿನ್ ರೀಸರ್ಚ್ ಆಯಂಡ್ ಟೆಸ್ಟ್ ಕಾಸ್ಮೊನಾಟ್ ಟ್ರೇನಿಂಗ್ ಸೆಂಟರ್‌ನಲ್ಲಿ ತರಬೇತಿಯನ್ನು ಮುಂದುವರೆಸಿದ್ದಾರೆ.
* ಭಾರತದ 75ನೇ ಸ್ವಾತಂತ್ರೋತ್ಸವ ವರ್ಷವಾದ 2022ರಲ್ಲಿ 10,000 ಕೋ.ರೂ.ವೆಚ್ಚದ "ಗಗನಯಾನ" ಯೋಜನೆಗೆ ಚಾಲನೆ ದೊರೆಯುವ ನಿರೀಕ್ಷೆಯಿದೆ.