ಕೋರೋಣ ಸೋಂಕು : ಲಂಕಾ ಅಧ್ಯಕ್ಷ ಮತ್ತು ಮಾರಿಷಸ್ ಪ್ರಧಾನಿ ಜತೆ ಮೋದಿ ಚರ್ಚೆ
Published by Basavaraj Halli
24 ಮೇ 2020
ಕೋವಿಡ್-19 ಸಂದಿಗ್ಧ ಪರಿಸ್ಥಿತಿ ಕುರಿತು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಶ್ರೀಲಂಕಾ ಅಧ್ಯಕ್ಷ ಗೊಟಬಾಯ ರಾಜಪಕ್ಸ ಮತ್ತು ಮಾರಿಷಸ್ ಪ್ರಧಾನಿ ಪ್ರವೀಂದ್ ಜಗನ್ನಾಥ್ ಜೊತೆ ಮಾತುಕತೆ ನಡೆಸಿದರು.
ಈ ಮಾತುಕತೆ ವೇಳೆ ಭಾರತಕ್ಕೆ ನೆರವಾಗುವ ಅಭಿವೃದ್ಧಿ ಯೋಜನೆಗಳು ಸೇರಿ ಬಂಡವಾಳ ಹೂಡಿಕೆಗೆ ಉಭಯ ದೇಶಗಳ ನಾಯಕರು ಒಪ್ಪಿಗೆ ಸೂಚಿಸಿರುವುದಾಗಿ ಮೋದಿ ತಿಳಿಸಿದ್ದಾರೆ.