ರಾಜೀವ್ ಗಾಂಧಿ ಕಿಸಾನ್ ನ್ಯಾಯ ಯೋಜನೆ ಆರಂಭಿಸಿದ ಛತ್ತೀಸಘಡ
Published by Basavaraj Halli
17 ಮೇ 2020
ಛತ್ತೀಸಘಡ ರಾಜ್ಯ ಸರ್ಕಾರ ರಾಜೀವ್ ಗಾಂಧಿ ಕಿಸಾನ್ ನ್ಯಾಯ ಯೋಜನೆ ಆರಂಭಿಸಲು ಉದ್ದೇಶಿಸಿದ್ದು 2020 ರ ಮೇ 21 ರಿಂದ ಈ ಯೋಜನೆ ಪ್ರಾರಂಭವಾಗಲಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ನಿಧನ ವಾರ್ಷಿಕೋತ್ಸವದ ನೆನಪಿಗಾಗಿ ಈ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ.
* ಈ ಯೋಜನೆಯು ರಾಜ್ಯದ ಗ್ರಾಮೀಣ ಆರ್ಥಿಕತೆಗೆ 5,100 ಕೋಟಿ ರೂ. ನೇರ ಬಂಡವಾಳ ಒದಗಿಸಲಿದೆ. 2020-21ರ ರಾಜ್ಯ ಬಜೆಟ್ ನಲ್ಲಿ ಈ ಯೋಜನೆಗೆ ಅವಕಾಶ ನೀಡಲಾಗಿದೆ.
* ಈ ಯೋಜನೆಯಡಿ ರೈತರಿಗೆ ಕಬ್ಬು, ಜೋಳ, ಭತ್ತದಂತಹ ಬೆಳೆಗಳಿಗೆ ಎಕರೆಗೆ 10,000 ರೂ. ಗಳಷ್ಟು ನೆರವು ನೀಡಲಿದೆ.
* ಈ ಯೋಜನೆಯಿಂದ ಸುಮಾರು 1.87 ದಶಲಕ್ಷಕ್ಕೂ ಹೆಚ್ಚು ರೈತರಿಗೆ ಪ್ರಯೋಜನವಾಗಲಿದೆ.
* ಎಣ್ಣೆಕಾಳು ಮತ್ತು ದ್ವಿದಳ ಧಾನ್ಯಗಳಿಗಾಗಿ ನೋಂದಾಯಿತ ಮತ್ತು ಅಧಿಸೂಚಿತ ಪ್ರದೇಶಗಳ ಆಧಾರದ ಮೇಲೆ ಹಣವನ್ನು ರೈತರಿಗೆ ವರ್ಗಾಯಿಸಲಾಗುವುದು