8 ಸಂಭಾವ್ಯ ಕೋರೋಣ ಲಸಿಕೆಗಳು ಕ್ಲಿನಿಕಲ್ ಪರೀಕ್ಷೆಯಲ್ಲಿ: ಡಬ್ಲ್ಯುಎಚ್ಒ
Published by Basavaraj Halli
18 ಮೇ 2020
ಜಿನೀವ (ಸ್ವಿಟ್ಸರ್‌ಲ್ಯಾಂಡ್) : ಇಡೀ ಜಗತ್ತನ್ನೇ ಮಾರಕವಾಗಿ ಕಾಡುತ್ತಿರುವ ಕೋವಿಡ್-19 ಸೋಂಕಿಗೆ ಔಷಧಿಯನ್ನು ಸಂಶೋಧಿಸಲು ಬಹುತೇಕ ರಾಷ್ಟ್ರಗಳು ಶ್ರಮಿಸುತ್ತಿವೆ. ಹಾಗೂ ಈಗಾಗಲೇ ಎಂಟು ಸಂಭಾವ್ಯ ಲಸಿಕೆಗಳು ಈಗ ಕ್ಲಿನಿಕಲ್ ಪರೀಕ್ಷೆಯ ಹಂತದಲ್ಲಿರುವುದಾಗಿ ವಿಶ್ವ ಅರೋಗ್ಯ ಸಂಸ್ಥೆ ತಿಳಿಸಿದೆ. ಇದಲ್ಲದೆ, ಇನ್ನೂ 110 ಸಂಭಾವ್ಯ ಲಸಿಕೆಗಳು ಅಭಿವೃದ್ಧಿಯು ವಿವಿಧ ಹಂತಗಳಲ್ಲಿದೆ ಎಂದು ಡಬ್ಲ್ಯೂಎಚ್ಓ ತಿಳಿಸಿದೆ.
ಕೋರೋಣ ಮಾರಕ ಸಾಂಕ್ರಾಮಿಕದ ಪಿಡುಗನ್ನು ನಿವಾರಿಸಲು ಜಗತ್ತಿನಾದ್ಯಂತ ಹಲವು ರಾಷ್ಟ್ರಗಳು ಶ್ರಮಿಸುತ್ತಿವೆ. ಇವುಗಳ ಪೈಕಿ ಅಮೆರಿಕ, ಚೀನಾ ಮತ್ತು ಜರ್ಮನಿ ಮುಂತಾದ ದೇಶಗಳು ಕೋರೋಣ ಲಸಿಕೆ ಕಂಡುಹಿಡಿಯುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿವೆ ಎಂದು ವಿಶ್ವ ಅರೋಗ್ಯ ಸಂಸ್ಥೆ ತಿಳಿಸಿದೆ.