ಮನುಷ್ಯನ ಮೂತ್ರದಿಂದ ಚಂದ್ರನ ಮೇಲೆ ಕಾಂಕ್ರೀಟ್ ತಯಾರಿಗೆ ಸಹಕಾರಿ: ಯುರೋಪ್ ಬಾಹ್ಯಾಕಾಶ ಸಂಸ್ಥೆ
Published by Basavaraj Halli
10 ಮೇ 2020
ಬರ್ಲಿನ್ : ಮಾನವನ ಮೂತ್ರದ ಸಹಾಯದಿಂದ ಚಂದ್ರಗ್ರಹದ ಮೇಲೆ ಕಾಂಕ್ರೀಟ್ ತಯಾರಿಕೆ ಮಾಡಬಹುದು ಎಂದು ಯುರೋಪ್ ನ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.
ಚಂದ್ರ ಗ್ರಹಕ್ಕೆ ಹೋಗಿ ಬಂದವರಿದ್ದಾರೆ. ಅಲ್ಲಿ ನೆಲೆಸಲು ಪ್ರಯತ್ನಗಳು, ಪ್ರಯೋಗಗಳು ನಡೆಯುತ್ತಲೇ ಇದೆ. ಆದರೆ ಚಂದ್ರನ ಮೇಲೆ ನಿರ್ಮಾಣಕ್ಕಾಗಿ ಮೇಲ್ಮೈ ಮೇಲೆ ಲಭ್ಯವಾಗುವ ವಸ್ತುಗಳನ್ನು ಮಾತ್ರ ಬಳಕೆ ಮಾಡುವ ಸಾಧ್ಯತೆಯಿರುವುದರಿಂದ ಭೂಮಿಯಿಂದ ನಿರ್ಮಾಣಕ್ಕೆ ವಸ್ತುಗಳನ್ನು ಪೂರೈಸುವದು ಸುಲಭದ ವಿಷಯವಲ್ಲ, ಇಂತಹ ಸಂದರ್ಭದಲ್ಲಿ ಚಂದ್ರನಲ್ಲಿ ನಿರ್ಮಾಣಕ್ಕೆ ಕಾಂಕ್ರೀಟ್ ತಯಾರಿಗೆ ಮಾನವನ ಮೂತ್ರ ಬಳಕೆಯ ವಸ್ತುವಾಗಬಹುದು ಎಂದು ಯುರೋಪ್ ನ ಬಾಹ್ಯಾಕಾಶ ಸಂಸ್ಥೆ ಹೇಳಿದೆ.