ಭಾರತದಲ್ಲಿ ಕೊರೊನಾ ಸೋಂಕು ಇಯಂತ್ರಣ ಸಲುವಾಗಿ ವಿಧಿಸಿರುವ ಕಾರಣ ಮ್ಯೂಚುಯಲ್ ಫಂಡ್ ಹೂಡಿಕೆದಾರರು ಸಹಜವಾಗಿ ಆತಂಕಕ್ಕೀಡಾಗಿದ್ದಾರೆ. ಇದರ ಮಧ್ಯೆಯೇ ಭಾರತೀಯ ರಿಸರ್ವ್‌ ಬ್ಯಾಂಕ್‌(RBI) ಹೂಡಿಕೆದಾರರಿಗೆ ಬಹು ದೊಡ್ಡ ರಿಲೀಫ್ ನೀಡಿದ್ದು, ಮ್ಯೂಚುವಲ್ ಫಂಡ್‌ಗಳಿಗೆ ಸೋಮವಾರ(27 ಏಪ್ರಿಲ್)ದಂದು 50,000 ಕೋಟಿ ರುಪಾಯಿಯ ವಿಶೇಷ ದ್ರವ್ಯತಾ ವ್ಯವಸ್ಥೆ ಕಲ್ಪಿಸಿದೆ. ರಾಷ್ಟ್ರವ್ಯಾಪಿ ವಿಧಿಸಿರುವ ಲಾಕ್‌ಡೌನ್ ಹಿನ್ನೆಲೆಯಲ್ಲಿ ಹಣಕಾಸು ಮಾರುಕಟ್ಟೆಯಲ್ಲಿ ಉಂಟಾಗಿರುವ ಏರುಪೇರುಗಳನ್ನು ಸುಧಾರಿಸಲು ಮ್ಯೂಚುವಲ್ ಫಂಡ್(MF)ಗಳ ಮೇಲಿನ ದ್ರವ್ಯತೆ ಒತ್ತಡವನ್ನು ಸುಗಮಗೊಳಿಸಲು ಆರ್‌ಬಿಐ ಈ ಕ್ರಮ ಕೈಗೊಂಡಿದೆ.