2ನೇ ಮಹಾಯುದ್ಧದ ಬಳಿಕ ಮೊದಲ ಬಾರಿ 'ಸ್ಪೆಲಿಂಗ್ ಬೀ' ರದ್ದು
Published by Siddaram Halli
23 ಏಪ್ರಿಲ್ 2020
ವಾಶಿಂಗ್ಟನ್ : 2020 ನೇ ಸಾಲಿನ ಪ್ರತಿಷ್ಠಿತ 'ಸ್ಪೆಲಿಂಗ್ ಬೀ' ಸ್ಪರ್ಧೆಯನ್ನು ಕೊರೋನ ವೈರಸ್ ಸಾಂಕ್ರಾಮಿಕ ಜಗತ್ತಿನಾದ್ಯಂತ ವ್ಯಾಪಿಸುತ್ತಿರುವ ಹಿನ್ನೆಲೆ ರದ್ದುಪಡಿಸಲಾಗಿದ್ದು, ಇದು ಎರಡನೇ ಮಹಾಯುದ್ಧ ನಡೆದ ಬಳಿಕ ಮೊದಲನೇ ಬಾರಿ ರದ್ದುಪಡಿಸಲಾಗಿದೆ.
* ಪ್ರಾಥಮಿಕ ಶಾಲೆ ಮತ್ತು ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ನಡೆಸಲಾಗುವ ಈ ಸ್ಪರ್ಧೆಯ ಮುಂದಿನ ಆವೃತ್ತಿ ಇನ್ನು 2021 ಜೂನ್ 1ರಂದು ನಡೆಯಲಿದೆ.
* ಈ ಸ್ಪರ್ಧೆಯಲ್ಲಿ ಹಲವು ವರ್ಷಗಳಿಂದ ಭಾರತೀಯ ಮೂಲದ ಅಮೆರಿಕನ್ನರು ಮೇಲುಗೈ ಸಾಧಿಸಿರುವದು ವಿಶೇಷ.