ಚೀನಾದಿಂದ 5 ಲಕ್ಷ ಕೋರೋಣ ಪರೀಕ್ಷಾ ಕಿಟ್ ಆಮದು
Published by Basavaraj Halli
18 ಏಪ್ರಿಲ್ 2020
ನವದೆಹಲಿ: ಭಾರತವು ಚೀನಾ ದೇಶದಿಂದ 5 ಲಕ್ಷ ಕೋವಿಡ್ ಪರೀಕ್ಷಾ ಕಿಟ್‌ಗಳನ್ನು ಆಮದು ಮಾಡಿಕೊಂಡಿರುವದಾಗಿ ICMR ತಿಳಿಸಿದೆ.
ಈ ಪರೀಕ್ಷಾ ಕಿಟ್ ಗಳನ್ನು ಕೇವಲ ನಿಗಾ ವಹಿಸಲು ಹಾಗೂ ದೇಶದ ಹಾಟ್ ಸ್ಪಾಟ್ ಗಳ ಸಂಖ್ಯೆಯನ್ನು ತಿಳಿಯಲು ಮಾತ್ರವೇ ಬಳಸಲಾಗುತ್ತದೆ.
ಭಾರತದಲ್ಲಿ ಪ್ರತಿ ದಿನ ಸರಿಸುಮಾರು 30,043 ಸ್ಯಾಂಪಲ್ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಈವರೆಗೆ ಒಟ್ಟು ಖಾಸಗಿ ಹಾಗೂ ಸರಕಾರಿ ಪ್ರಯೋಗಾಲಯಗಳು ಸೇರಿ 2.90 ಲಕ್ಷ ಪರೀಕ್ಷೆಗಳನ್ನು ನಡೆಸಿವೆ.