RBI ನಿಂದ ಕೋರೋಣ ವಿರುದ್ಧ ಹೋರಾಟಕ್ಕೆ ನೂತನ ಕ್ರಮಗಳು
Published by Basavaraj Halli
17 ಏಪ್ರಿಲ್ 2020
ಭಾರತೀಯ ರಿಸರ್ವ್ ಬ್ಯಾಂಕ್(RBI) ದಿಂದ ಕರೋನಾ ವಿರುದ್ಧದ ಹೋರಾಟಕ್ಕೆ ಹೆಚ್ಚುವರಿ ಕ್ರಮಗಳನ್ನು RBI ನ ಗೋವರ್ನರ್ ಶಕ್ತಿಕಾಂತ ದಾಸ್ ಮಾಧ್ಯಮ ಘೋಷ್ಠಿ ನಡೆಸುವ ಮೂಲಕ ಘೋಷಿಸಿದ್ದಾರೆ.
ಪ್ರಮುಖ ಅಂಶಗಳು :
* ಬ್ಯಾಂಕ್ ಗಳು ಎಂದಿನಂತೆ ಕಾರ್ಯ ನಿರ್ವಾಹಣೆ
* ರಿಸರ್ವ್ ರೇಪೊದರ 3.75 ಕ್ಕೆ ಇಳಿಕೆ
* ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 50 ಸಾವಿರ ಕೋಟಿ ಮೀಸಲು
* ನಬಾರ್ಡ್ ಗೆ 25 ಸಾವಿರ ಕೋಟಿ ನೀಡಲಾಗುತ್ತಿದೆ
* ನಬಾರ್ಡ್ 25 ಸಾವಿರ ಕೋಟಿ ಮೀಸಲಿಡಲಾಗಿದೆ
* ಸಿಐಡಿಬಿಐ- ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಮಂಡಳಿಗೆ 15 ಸಾವಿರ ಕೋಟಿ ಮೀಸಲು
* ನ್ಯಾಶನಲ್ ಹೌಸಿಂಗ್ ಬ್ಯಾಂಕ್ ಗೆ 10 ಸಾವಿರ ಕೋಟಿ ಮೀಸಲು
* ಕೊರೊನಾ ವಿರುದ್ಧ ಹೋರಾಟಕ್ಕೆ ರಾಜ್ಯಗಳಿಗೆ ಶೇ.60ರಷ್ಟು ಹೆಚ್ಚುವರಿ ಹಣ
* ಆರ್.ಬಿ.ಐನಿಂದ ಬ್ಯಾಂಕ್ ಗಳಿಗೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ
* ಬ್ಯಾಂಕ್ ಗಳು ಲಾಭದ ಅಂಶವನ್ನು ಘೋಷಣೆ ಮಾಡುವ ಅಗತ್ಯವಿಲ್ಲ
* 3 ತಿಂಗಳ ಕಾಲ ಎನ್ ಪಿ.ಎ ನಿಯಮ ಅನ್ವಯಿಸುವುದಿಲ್ಲ