WWF ಭಾರತದ ರಾಯಭಾರಿಯಾಗಿ ಭಾರತೀಯ ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್ ನೇಮಕ
Published by Basavaraj Halli
17 ಏಪ್ರಿಲ್ 2020
ಭಾರತದ ಚೆಸ್ ದಂತಕಥೆಯಾದ ವಿಶ್ವನಾಥನ್ ಆನಂದ್ ಅವರನ್ನು ವರ್ಲ್ಡ್ ವೈಡ್ ಫಂಡ್ (WWF)ನ ಭಾರತದ ರಾಯಭಾರಿಯಾಗಿ ಆಯ್ಕೆಮಾಡಲಾಗಿದೆ. ವಿಶ್ವನಾಥನ್ ಆನಂದ್ ಪರಿಸರ ಶಿಕ್ಷಣ ಕಾರ್ಯಕ್ರಮಕ್ಕಾಗಿ ಸಂಸ್ಥೆಗೆ ಸೇರಿದ್ದಾರೆ.
* ಪರಿಸರ ಶಿಕ್ಷಣ ಕಾರ್ಯಕ್ರಮವನ್ನು 1976 ರಲ್ಲಿ ಪ್ರಾರಂಭಿಸಲಾಯಿತು.
* ಪರಿಸರ ಶಿಕ್ಷಣ ಕಾರ್ಯಕ್ರಮ ದೇಶದ ಯುವಕರು, ಶಾಲಾ ಮಕ್ಕಳು ಮತ್ತು ನಾಗರಿಕರನ್ನು ತಲುಪಲು ಕ್ರಮ ಕೈಗೊಳ್ಳುತ್ತದೆ.
* ಒಟ್ಟು 5 ಲಕ್ಷ ಮಕ್ಕಳು ಮತ್ತು 2000 ಶಾಲೆಗಳನ್ನು ಪರಿಸರ ಶಿಕ್ಷಣ ಕಾರ್ಯಕ್ರಮ ತಲುಪುತ್ತದೆ.
* ವರ್ಲ್ಡ್ ವೈಡ್ ಫಂಡ್ : WWF ಎನ್ನುವುದು 1961 ರಲ್ಲಿ ಸ್ಥಾಪನೆಯಾದ ಅಂತಾರಾಷ್ಟ್ರೀಯ ಸರ್ಕಾರೇತರ ಸಂಸ್ಥೆ ಆಗಿದೆ.