ಮಾನವ ಸಂಪನ್ಮೂಲ ಸಚಿವಾಲಯದಿಂದ “ಭಾರತ್ ಪಾದೇ ಆನ್‌ಲೈನ್ ಅಭಿಯಾನ” ಆರಂಭ
Published by Surekha Halli
13 ಏಪ್ರಿಲ್ 2020
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು “ಭಾರತ್ ಪಾಧೆ ಆನ್‌ಲೈನ್ ಅಭಿಯಾನ” (Bharat Padhe Online Campaign) ಎಂಬ ಒಂದು ವಾರದ ಅಭಿಯಾನ ಆರಂಭಿಸಿದೆ. ಈ ಅಭಿಯಾನದ ಮೂಲಕ ಲಾಕ್ ಡೌನ್ ಸಮಯದಭಾರತದಲ್ಲಿ ಆನ್‌ಲೈನ್ ಶಿಕ್ಷಣವನ್ನು ಉತ್ತಮಪಡಿಸುವ ಗುರಿಯನ್ನು ಹೊಂದಿದೆ.
* ಡಿಜಿಟಲ್ ಶಿಕ್ಷಣವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬರಬಹುದಾದ ಕುಂದು ಕೊರತೆಗಳನ್ನು ನೀಗಿಸಲು ದೇಶದ ಶೈಕ್ಷಣಿಕ ತಜ್ಞರನ್ನು ಅವರ ಜ್ಞಾನ ಮತ್ತು ಪರಿಹಾರಗಳನ್ನು ಹಂಚಿಕೊಳ್ಳಲು ವೇದಿಕೆ ಕಲ್ಪಿಸುವುದೇ ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.