ಶನಿವಾರ, 11 ಎಪ್ರಿಲ್ 2020
9:10 ಪೂರ್ವಾಹ್ನ
Daily PDF
ಭಾರತ ಸರ್ಕಾರದ “ಕೇಂದ್ರ ಭಂಡಾರ್” ದಿಂದ ತಯಾರಿಸಲಾದ ಎಸೆನ್ಷಿಯಲ್ ಕಿಟ್ಗಳ ವಿತರಣೆ
Authored by:
Basavaraj Halli
ಕೇಂದ್ರ ಸರ್ಕಾರದ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಸಚಿವಾಲಯವು ಅಗತ್ಯವಿರುವ BPL ಕುಟುಂಬಗಳಿಗೆ ಅಗತ್ಯ ಕಿಟ್‌ಗಳನ್ನು ತಯಾರಿಸಿ ವಿತರಿಸಿತು. ಈ ಕಿಟ್‌ಗಳನ್ನು "ಕೇಂದ್ರೀಯ ಭಂಡಾರ್" ತಯಾರಿಸಿದೆ.
* ಎಸೆನ್ಷಿಯಲ್ ಕಿಟ್ : ಎಸೆನ್ಷಿಯಲ್ ಕಿಟ್‌ನಲ್ಲಿ 3 ಕೆಜಿ ಅಕ್ಕಿ, 3 ಕೆಜಿ ಗೋಧಿ, 2 ಕೆಜಿ ಬೇಳೆ, 1 ಲೀಟರ್ ಅಡುಗೆ ಎಣ್ಣೆ, ಉಪ್ಪು, ಸ್ನಾನದ ಸೋಪ್, ಬಿಸ್ಕತ್ತು ಮತ್ತು ಡಿಟರ್ಜೆಂಟ್ ಸೋಪ್ ಬಾರ್‌ಗಳನ್ನು ಒಳಗೊಂಡಿದೆ.
* ಕೇಂದ್ರ ಭಂಡಾರ್ : ಕೇಂದ್ರೀಯ ಭಂಡಾರವು 1963 ರಲ್ಲಿ ಸ್ಥಾಪನೆಯಾಗಿದ್ದು, ಈ ಸಂಸ್ಥೆಯು ಕೇಂದ್ರ ಸರ್ಕಾರಿ ನೌಕರರ ಗ್ರಾಹಕರ ಸಹಕಾರಿ ಸಂಘವಾಗಿದೆ.