ಮಂಗಳವಾರ, 07 ಎಪ್ರಿಲ್ 2020
8:06 ಅಪರಾಹ್ನ
Daily PDF
ಕೊರೋನಾ ವೈರಸ್ : 24 ಔಷಧಿಗಳ ಮೇಲಿನ ನಿರ್ಬಂಧ ತೆರವುಗೊಳಿಸಿದ ಕೇಂದ್ರ
Authored by:
Basavaraj Halli
ಹೊಸದಿಲ್ಲಿ : ಕೇಂದ್ರ ಸರ್ಕಾರ ಭಾರತದಲ್ಲಿ ತಯಾರಾಗುವ ಒಟ್ಟು 24 ಔಷಧಿಗಳ ಮೇಲಿನ ನಿರ್ಬಂಧ ತೆರವುಗೊಳಿಸಿದೆ ಆದೇಶ ಹೊರಡಿಸಿದೆ. ದೇಶದಲ್ಲಿ ಕೊರೋನಾ ವೈರಸ್ ಸೋಂಕು ಕಾಣಿಸಿಕೊಂಡ ಆರಂಭದಲ್ಲಿ ಕೆಲ ಔಷಧಿಗಳ ಮೇಲೆ ನಿರ್ಬಂಧ ಹೇರಿ ರಫ್ತು ಮಾಡದಂತೆ ಸೂಚನೆ ನೀಡಿತ್ತು.
ವಿಶ್ವಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆ ನಿರ್ಬಂಧ ವಿಧಿಸಿದ ಈ ಔಷಧಿಗಳ ಬೇಡಿಕೆ ಹೆಚ್ಚಾಗಿದೆ, ಆದ್ದರಿಂದ ಕೇಂದ್ರ ಸರ್ಕಾರ ಈ ಔಷಧಿಗಳ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಿದೆ.
* ಭಾರತ ಸರ್ಕಾರ ರಫ್ತು ನಿಷೇಧಿಸಿರುವ Hydroxychloroquine ಔಷಧಿಗಾಗಿ ಅಮೆರಿಕ ಸೇರಿದಂತೆ ವಿಶ್ವದ 30ಕ್ಕೂ ಹೆಚ್ಚು ರಾಷ್ಟ್ರಗಳು ಭಾರತಕ್ಕೆ ಬೇಡಿಕೆ ಇಟ್ಟಿವೆ.