ಶನಿವಾರ, 04 ಎಪ್ರಿಲ್ 2020
6:38 ಅಪರಾಹ್ನ
Daily PDF
ಕೋವಿಡ್-19: ರಾಜ್ಯ ಸರ್ಕಾರದ ವಕ್ತಾರರಾಗಿ ಸಚಿವ ಸುರೇಶ್ ಕುಮಾರ್
Authored by:
Siddaram Halli
ಬೆಂಗಳೂರು : ಮಹಾಮಾರಿ ಕೋವಿಡ್-19 ವೈರಸ್ ನಿರ್ವಹಣೆಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಮಾಹಿತಿ ನೀಡುವ ಸಲುವಾಗಿ ಕರ್ನಾಟಕ ರಾಜ್ಯ ಸರ್ಕಾರದ ವಕ್ತಾರರಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಅವರು ಆಯ್ಕೆಯಾಗಿದ್ದಾರೆ.
ರಾಜ್ಯದ ಮುಖ್ಯಮಂತ್ರಿ B S ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಈ ಹೊಸ ಜವಾಬ್ದಾರಿಯನ್ನು ಸುರೇಶ್‌ಕುಮಾರ್ ವಹಿಸಿಕೊಂಡಿದ್ದಾರೆ.
* ಈ ಮೊದಲು ಆರೋಗ್ಯ ಸಚಿವ ಬಿ. ಶ್ರೀರಾಮುಲು ಮತ್ತು ವೈದ್ಯಕೀಯ ಶಿಕ್ಷಣ ಸಚಿವ
ಡಾ.ಕೆ.ಸುಧಾಕರ್ ಅವರು ಪ್ರತ್ಯೇಕವಾಗಿ ಮಾಧ್ಯಮಗಳಿಗೆ ಮಾಹಿತಿಗಳನ್ನು ನೀಡುತ್ತಿದ್ದರು.