ಮಂಗಳವಾರ, 31 ಮಾರ್ಚ್ 2020
7:27 ಅಪರಾಹ್ನ
Daily PDF
ಕೊರೋನಾ ವಿರುದ್ಧ ಹೋರಾಡಲು ಭಾರತ-ಫ್ರಾನ್ಸ್ ನಡುವೆ ಒಪ್ಪಂದ
Authored by:
Basavaraj Halli
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ದಿನಾಂಕ ಮಾರ್ಚ್ 31 ರಂದು ಫ್ರಾನ್ಸ್ ಅಧ್ಯಕ್ಷರಾದ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಕರೋನ ವೈರಸ್ ಹರಡುವುದನ್ನು ತಡೆಗಟ್ಟುವ ಕ್ರಮ, ಚಿಕಿತ್ಸೆ ಮತ್ತು ಲಸಿಕೆಗಳ ಬಗ್ಗೆ ಸಂಶೋಧನೆ ಕುರಿತು ಎರಡೂ ದೇಶಗಳ ತಜ್ಞ ತಂಡಗಳು ಸಕ್ರಿಯವಾಗಿ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ಉಭಯ ದೇಶಗಳ ನಾಯಕರು ದೂರವಾಣಿ ಮೂಲಕ ಸಂಭಾಷಣೆ ನಡೆಸಿದರು.
ಅಲ್ಲದೆ, ಇಬ್ಬರೂ ನಾಯಕರು ಬಿಕ್ಕಟ್ಟಿನ ದೇಶೀಯ ಮತ್ತು ಅಂತರರಾಷ್ಟ್ರೀಯ ಅಂಶಗಳನ್ನು ಚರ್ಚಿಸಿದರು ಎಂದು ಪ್ರಧಾನಿ ಕಚೇರಿಯ ಹೇಳಿಕೆ ತಿಳಿಸಿದೆ.