ಮಂಗಳವಾರ, 31 ಮಾರ್ಚ್ 2020
12:12 ಅಪರಾಹ್ನ
Daily PDF
ಲಾಕ್ ಡೌನ್ ನಿಂದ `ಹಣಕಾಸು ವರ್ಷ' ವಿಸ್ತರಣೆ ಇಲ್ಲ : ಕೇಂದ್ರ ಸರ್ಕಾರ
Authored by:
Basavaraj Halli
ನವದೆಹಲಿ : ದೇಶಾದ್ಯಂತ ಕೊರೊನಾ ವೈರಸ್ ವ್ಯಾಪಿಸುತ್ತಿರುವ ಈ ಸಂದರ್ಭದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದು, ಇದರಿಂದ 2019-20 ನೇ ಸಾಲಿನ ಹಣಕಾಸು ವರ್ಷದ ಅವಧಿಯನ್ನು ಹೆಚ್ಚಿಸಬಹುದೆಂದು ಜನರ ಮಧ್ಯೆ ಗಾಳಿ ಸುದ್ದಿ ಹರಿದಾಡುತ್ತಿದ್ದು ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು "ಹಣಕಾಸು ವರ್ಷವನ್ನು ವಿಸ್ತರಿಸುವುದಿಲ್ಲ" ಎಂದು ತಿಳಿಸಿದೆ.
2019-20 ನೇ ಸಾಲಿನ ಹಣಕಾಸು ವರ್ಷದ ಅವಧಿಯು ಮಾರ್ಚ್ 31 ರಂದು ಯಥಾಪ್ರಕಾರ ಪ್ರತಿವರ್ಷದಂತೆ ಮುಕ್ತಾಯವಾಗುತ್ತದೆ ಎಂದು ಕೇಂದ್ರ ಸಚಿವಾಲಯ ಸ್ಪಷ್ಟನೆ ನೀಡಿದೆ.