ಬೆಂಗಳೂರು : ಕೊರೋನಾ ವೈರಸ್ ಸೋಂಕಿನ ಕುರಿತ ಮಾಹಿತಿಗಳಾದ ಸೋಂಕಿತ ರೋಗಿಗಳ ಮಾರ್ಗ ನಕ್ಷೆಗಳು, ಕೊರೋನಾ ಚಿಕಿತ್ಸೆ ನೀಡುವ ಆಸ್ಪತ್ರೆಗಳು, ಸಹಾಯವಾಣಿ ಸಂಖ್ಯೆಗಳು ಸೇರಿದಂತೆ ವಿವಿಧ ರೀತಿಯ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ಅರೋಗ್ಯ ಇಲಾಖೆಯು ಕರೋನ ವಾಚ್ App ಬಿಡುಗಡೆ ಮಾಡಿದೆ. * ಕರ್ನಾಟಕ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ Corona ಆಯಪ್ ಆಂಡ್ರಾಯ್ಡ್ ಅವತರಣಿಕೆಯಲ್ಲಿ ಲಭ್ಯವಿದ್ದು, ಈ ಆಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್​ನಲ್ಲಿ ಲಭ್ಯವಿದೆ. * KSRSAC KGIC ಈ ಆಯಪ್ ಅಭಿವೃದ್ಧಿ ಪಡಿಸಿದೆ.