ಶುಕ್ರವಾರ, 27 ಮಾರ್ಚ್ 2020
8:10 ಪೂರ್ವಾಹ್ನ
Daily PDF
COVID-19 : ಪ್ರಧಾನ ಮಂತ್ರಿಗಳಿಂದ ಗರಿಬ್ ಕಲ್ಯಾಣ ಅನ್ನ ಯೋಜನೆ ಆರಂಭ
Authored by:
Basavaraj Halli
ದಿನಾಂಕ ಮಾರ್ಚ್ 26, 2020 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ ಅವರು ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ ಅನ್ನ ಯೋಜನೆಗೆ ಚಾಲನೆ ನೀಡಿದರು.
ದೇಶದಲ್ಲಿ ವ್ಯಾಪಿಸುತ್ತಿರುವ COVID-19 ನಿಯಂತ್ರಿಸಲು ಮತ್ತು ಅದರ ಪರಿಣಾಮಗಳ ವಿರುದ್ಧ ಹೋರಾಡಲು ಆರ್ಥಿಕ ಸಹಾಯ ನೀಡುವ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ ಸುಮಾರು 1.7 ಲಕ್ಷ ಕೋಟಿ ರೂ ಬಿಡುಗಡೆಗೊಳಿಸಿದೆ.
* ಈ ಯೋಜನೆಯಡಿ ಸುಮಾರು 80 ಕೋಟಿ ಜನರಿಗೆ ಮುಂದಿನ ಮೂರು ತಿಂಗಳವರೆಗೆ ಹೆಚ್ಚುವರಿ 5 ಕೆಜಿ ಉಚಿತ ಅಕ್ಕಿ ಮತ್ತು ಗೋಧಿ ಸಿಗಲಿದೆ. ಜೊತೆಗೆ ಪ್ರತಿ ಮನೆಗೆ 1 ಕೆಜಿ ಉಚಿತ ದ್ವಿದಳ ಧಾನ್ಯಗಳನ್ನು ನೀಡಲಾಗುವದು.
* ಈ ಯೋಜನೆಯಡಿ ವೈರಸ್ ವಿರುದ್ಧದ ಹೋರಾಟದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ನೈರ್ಮಲ್ಯ ಕಾರ್ಮಿಕರು, ದಾದಿಯರು, ಅರೆವೈದ್ಯರು ಮತ್ತು ಇತರ ಸಿಬ್ಬಂದಿಗೆ ವಿಮಾ ಯೋಜನಾ ರಕ್ಷಣೆ ನೀಡುತ್ತದೆ.
* ಸುಮಾರು 3 ಕೋಟಿ ಜನ ವೃದ್ಧಾಪ್ಯ, ವಿಕಲಚೇತನ ಮತ್ತು ಪಿಂಚಣಿದಾರರಿಗೆ ನೇರ 1000 ರೂಪಾಯಿ ಹಣ ವರ್ಗಾವಣೆ ಮಾಡಲಾಗುವದು. ಇದರಿಂದ 3 ಕೋಟಿ ಜನರಿಗೆ ಅನುಕೂಲವಾಗಲಿದೆ.