ಶುಕ್ರವಾರ, 27 ಮಾರ್ಚ್ 2020
8:08 ಪೂರ್ವಾಹ್ನ
Daily PDF
ಭಾರತೀಯ ಫುಟ್ಬಾಲ್ ತಂಡದ ಕ್ಯಾಪ್ಟನ್ ಸುನಿಲ್ ಚೆಟ್ರಿ ಫಿಫಾದ COVID-19 ಅಭಿಯಾನಕ್ಕೆ ಆಯ್ಕೆ
Authored by:
Basavaraj Halli
ವಿಶ್ವ ಫಿಫಾ ಆಡಳಿತ ಮಂಡಳಿ (ಫೆಡರೇಶನ್ ಇಂಟರ್ನ್ಯಾಷನಲ್ ಫುಟ್ಬಾಲ್ ಅಸೋಸಿಯೇಷನ್ ಅಥವಾ ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಅಸೋಸಿಯೇಷನ್ ಫುಟ್ಬಾಲ್) COVID-19 ಮಾರಕ ವೈರಾಣುವನ್ನು ಎದುರಿಸಲು ಅಭಿಯಾನ ಆರಂಭಿಸಿದ್ದು ಈ ಅಭಿಯಾನಕ್ಕಾಗಿ ಒಟ್ಟು 28 ಪುಟ್ಬಾಲ್ ತಾರೆಯರನ್ನು ಆಯ್ಕೆ ಮಾಡಿದ್ದು ಇದರಲ್ಲಿ, ಭಾರತೀಯ ಫುಟ್ಬಾಲ್ ತಂಡದ ನಾಯಕರಾದ ಸುನಿಲ್ ಚೆಟ್ರಿ ಅವರು ಕೂಡ ಸ್ಥಾನ ಪಡೆದಿದ್ದಾರೆ.
* ಕರೋನಾ ವೈರಸ್ ವಿರುದ್ಧ ಹೋರಾಡಲು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು FIFA ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಕೈಜೋಡಿಸಿ ಅಭಿಯಾನವನ್ನು ಪ್ರಾರಂಭಿಸಿದೆ.