ಗುರುವಾರ, 26 ಮಾರ್ಚ್ 2020
8:40 ಪೂರ್ವಾಹ್ನ
Daily PDF
ಪಡಿತರ ಅಂಗಡಿಗಳಿಗೆ ಹೆಚ್ಚುವರಿ ಆಹಾರ ಧಾನ್ಯಗಳ ಸರಬರಾಜಿಗೆ : ಕೇಂದ್ರ ಸಚಿವ ಸಂಪುಟ ಅನುಮೋದನೆ
Authored by:
Basavaraj Halli
ದಿನಾಂಕ ಮಾರ್ಚ್ 25, 2020 ರಂದು ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪಡಿತರ ಅಂಗಡಿಗಳ ಮೂಲಕ ಆಹಾರ ಧಾನ್ಯಗಳನ್ನು ಹೆಚ್ಚುವರಿ ಸರಬರಾಜು ಮಾಡಲು ಅಂಗೀಕರಿಸಲಾಯಿತು. ಕರೋನ ವೈರಸ್ ಭೀತಿಯಿಂದ ಇಡೀ ಭಾರತವೇ ಲಾಕ್-ಡೌನ್ ಆಗಿರುವದರಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದೆಂದು
ಸಬ್ಸಿಡಿ ಮೂಲಕ ವಿತರಿಸುವ ಆಹಾರ ಧಾನ್ಯಗಳ ಪ್ರತಿ ತಿಂಗಳ ಕೋಟಾವನ್ನು 2 ಕೆಜಿ ಯಿಂದ 7 ಕೆಜಿವರೆಗೆ ಹೆಚ್ಚಿಸಲು ಕ್ರಮವನ್ನು ತೆಗೆದುಕೊಳ್ಳಲಾಗಿದೆ.
* ಲಾಕ್ ಡೌನ್ ಸಮಯದಲ್ಲಿ ಪ್ರತಿ ವ್ಯಕ್ತಿಗೆ 7 ಕೆಜಿ ಆಹಾರ ಧಾನ್ಯಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ.
* ದೇಶದ 80 ಕೋಟಿಗೂ ಹೆಚ್ಚು ಜನರಿಗೆ ಇದರ ಪ್ರಯೋಜನವಾಗಲಿದೆ.
* ಭಾರತ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳನ್ನು ಒದಗಿಸುತ್ತಿದೆ.