ಬುಧವಾರ, 18 ಮಾರ್ಚ್ 2020
5:30 ಪೂರ್ವಾಹ್ನ
Daily PDF
ಪ್ರವಾಸಿತಾಣಗಳ ವೀಕ್ಷಣೆಗಾಗಿ ಮೈಸೂರಿನಲ್ಲಿ ಡಬಲ್ ಡೆಕ್ಕರ್ ಬಸ್ ಸಂಚಾರ
Authored by:
Basavaraj Halli
ಮೈಸೂರು : ಸಾಂಸ್ಕೃತಿಕ ನಗರಿ ಎಂದೇ ಪ್ರಸಿದ್ದಿ ಪಡೆದಿರುವ ಮೈಸೂರಿನಲ್ಲಿ ಬರುವ ಏಪ್ರಿಲ್ ಒಂದನೇ ತಾರೀಕಿನಿಂದ ಡಬಲ್ ಡೆಕ್ಕರ್ ಬಸ್ ಸೇವೆಯನ್ನು ಆರಂಭಿಸಲಾಗುವದು, ಬರುವ ದಿನಗಳಲ್ಲಿ ಪ್ರವಾಸಿಗರು ಡಬಲ್ ಡೆಕ್ಕರ್ ಬಸ್‌ನಲ್ಲಿ ಮೈಸೂರಿ ನಗರದ ಪ್ರವಾಸಿತಾಣಗಳನ್ನು ಸಂದರ್ಶಿಸಬಹುದಾಗಿದೆ.
ವಿಶ್ವ ಪ್ರಸಿದ್ಧ ಪ್ರವಾಸಿತಾಣಗಳಾದ ಮೈಸೂರು ಹಾಗೂ ಹಂಪಿಯ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಡಬಲ್ ಡೆಕ್ಕರ್ ಬಸ್ ಸೇವೆಯನ್ನು ರಾಜ್ಯ ಸರ್ಕಾರದಿಂದ ಆರಂಭಿಸಲಾಗುತ್ತಿದೆ.