ಮಂಗಳವಾರ, 10 ಮಾರ್ಚ್ 2020
5:30 ಪೂರ್ವಾಹ್ನ
Daily PDF
ಪಿವಿ ಸಿಂಧುಗೆ BBC ಗರಿ ಮತ್ತು ಪಿಟಿ ಉಷಾ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ
Authored by:
Basavaraj Halli
ನವದೆಹಲಿ : ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಅವರನ್ನು ವರ್ಷದ ಬಿಬಿಸಿ ಭಾರತೀಯ ಕ್ರೀಡಾಪಟು ಎಂದು ಆಯ್ಕೆ ಮಾಡಲಾಗಿದೆ ಮತ್ತು ಪಿಟಿ ಉಷಾ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗಿದೆ.
ಸಿಂಧು ಐದು ವಿಶ್ವ ಚಾಂಪಿಯನ್ ಶಿಪ್ ಪದಕಗಳನ್ನು ಪಡೆದ್ದಿದ್ದಲ್ಲದೆ ಒಲಿಂಪಿಕ್ಸ್ ನಲ್ಲಿ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.
ಇನ್ನುಳಿದಂತೆ ಭಾರತದ ಓಟಗಾರ್ತಿಯಾದ P T ಉಷಾ ಅವರಿಗೆ ಜೀವಮಾನ ಸಾಧನೆಯಾ ಪ್ರಶಸ್ತಿಯನ್ನು ನೀಡಲಾಯಿತು.