ಶನಿವಾರ, 29 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ದೆಹಲಿ ವಿಶೇಷ ಪೊಲೀಸ್ ಆಯುಕ್ತರಾಗಿ ಶ್ರೀವಾಸ್ತವ ನೇಮಕ
Authored by:
Basavaraj Halli
ನವದೆಹಲಿ : ಹಿರಿಯ IPS ಅಧಿಕಾರಿ ಎಸ್. ಎನ್. ಶ್ರೀವಾಸ್ತವರನ್ನು ದೆಹಲಿಯ ವಿಶೇಷ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ. ಇವರಿಗೆ ತಕ್ಷಣ ಅಧಿಕಾರ ವಹಿಸಿಕೊಳ್ಳಲು ಕೇಂದ್ರ ಗೃಹ ಇಲಾಖೆ ಈ ಕುರಿತು ಆದೇಶ ಹೊರಡಿಸಿದೆ. ಇತ್ತೀಚಿಗೆ ದೆಹಲಿಯಲ್ಲಿ ಗಲಭೆ ನಡೆದಿದ್ದರಿಂದ ತಕ್ಷಣ ಅವರನ್ನು ವಿಶೇಷ ಆಯುಕ್ತರನ್ನಾಗಿ ನೇಮಿಸಲಾಗಿದೆ.
ಈ ಹಿಂದೆ ಈ ಹುದ್ದೆಯಲ್ಲಿ ಅಮೂಲ್ಯ ಪಟ್ನಾಯಕ್ ಕಾರ್ಯನಿರ್ವಹಿಸುತ್ತಿದ್ದು, ಅವರ ಸ್ಥಾನಕ್ಕೆ ನೇಮಕಗೊಂಡಿದ್ದಾರೆ.