ಶುಕ್ರವಾರ, 28 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಭಾರತ-ಮ್ಯಾನ್ಮಾರ್ ದೇಶಗಳ ನಡುವೆ ವಿವಿಧ 10 ಒಪ್ಪಂದಗಳ ವಿನಿಮಯ
Authored by:
Basavaraj Halli
ಭಾರತ ಮತ್ತು ಮ್ಯಾನ್ಮಾರ್ ದೇಶಗಳ ನಡುವೆ ನವದೆಹಲಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ 10 ಮಹತ್ವದ ಒಪ್ಪಂದಗಳನ್ನು ಗುರುವಾರ ವಿನಿಮಯ ನಡೆಯಿತು.
ಉಭಯ ನಾಯಕರು ದ್ವಿಪಕ್ಷೀಯ ವಿಷಯಗಳ ಕುರಿತು ವ್ಯಾಪಕವಾದ ಚರ್ಚೆ ನಡೆಸಿದರು. ಯು ವಿನ್ ಮೈಂಟ್ ಅವರು ತಮ್ಮ ಪತ್ನಿಯವರೊಂದಿಗೆ ಭಾರತದ ನಾಲ್ಕು ದಿನಗಳ ಅಧಿಕೃತ ಭೇಟಿಗಾಗಿ ಆಗಮಿಸಿದ್ದಾರೆ.
ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ಮ್ಯಾನ್ಮಾರ್ ಅಧ್ಯಕ್ಷ ಯು ವಿನ್ ಮೈಂಟ್ ಅವರ ನಡುವೆ ನವದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ನಡೆದ ಮಾತುಕತೆಯ ಬಳಿಕ ಒಪ್ಪಂದಗಳು ಮತ್ತು ಒಡಂಬಡಿಕೆಗಳಿಗೆ ಸಹಿ ಹಾಕಲಾಯಿತು.