ಶುಕ್ರವಾರ, 28 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಇಸ್ರೋದಿಂದ ಮಾರ್ಚ್ 5 ರಂದು ಜಿಐಸ್ಯಾಟ್-1 ಉಪಗ್ರಹ ಉಡಾವಣೆ
Authored by:
Basavaraj Halli
ಬೆಂಗಳೂರು : ಮಾರ್ಚ್ 5ರಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯು ಉಪಗ್ರಹ 'ಜಿಐಸ್ಯಾಟ್-1' ಅನ್ನು ಶ್ರೀಹರಿಕೋಟಾದ ಸತೀಶ್ ದವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಿದೆ. ಭೂಸ್ಥಾಯಿ ಉಪಗ್ರಹ ಉಡಾವಣಾ ವಾಹನ GSLV F10 ಮೂಲಕ ಈ ಉಡಾವಣೆ ನಡೆಯಲಿದೆ.
* 2,275 ಕೆ.ಜಿ. ತೂಕದ ಜಿಐಸ್ಯಾಟ್-1 ಕ್ಷಿಪ್ರ ಭೂ ವೀಕ್ಷಣಾ ಗುಣವನ್ನು ಹೊಂದಿದೆ.
* ಪ್ರತಿ 30 ನಿಮಿಷಕ್ಕೆ ಭಾರತದ ಪ್ರತಿ ಭೂ ಪ್ರದೇಶದ ಚಿತ್ರವನ್ನು ತೆಗೆಯುತ್ತದೆ.
* ಪ್ರಾಕೃತಿಕ ವಿಕೋಪ, ಯುದ್ಧ ಮುಂತಾದ ಸಂದರ್ಭಗಳಲ್ಲಿ ಮಹತ್ವದ ಚಿತ್ರಗಳನ್ನು ಸೆರೆಹಿಡಿದು ರವಾನಿಸಲಿದೆ.