ಸೋಮವಾರ, 24 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಕೊರೊನಾ ವೈರಸ್: ಚೀನಾಗೆ ಇದು ಅತಿದೊಡ್ಡ ಆರೋಗ್ಯ ತುರ್ತು ಪರಿಸ್ಥಿತಿ
Authored by:
Basavaraj Halli
ಬೀಜಿಂಗ್ : ಚೀನಾ ರಾಷ್ಟ್ರದಲ್ಲಿ ಕೊರೊನಾ ವೈರಸ್ ನಿಂದ ಸಾವಿನ ಸಂಖ್ಯೆಯು ದಿನೇ ದಿನೆ ಏರಿಕೆಯಾಗುತ್ತಿದ್ದು, ಇದರ ನಿರ್ವಹಣೆ ಇಲ್ಲಿನ ಸರ್ಕಾರಕ್ಕೆ ಬಲು ಕಷ್ಟವಾಗಿದೆ. ಈಗಾಗಲೇ ಈ ದೇಶದಲ್ಲಿ ಮಾರಕ ರೋಗ ಕೊರೊನಾ ವೈರಸ್ ಗೆ ಸುಮಾರು 2,468 ಮಂದಿ ಪ್ರಾಣ ಬಿಟ್ಟಿದ್ದಾರೆ ಮತ್ತು ಇನ್ನು ಸುಮಾರು 78,966 ಜನರಲ್ಲಿ ಈ ಮಾರಕ ಸೋಂಕು ಪತ್ತೆಯಾಗಿದೆ. ಇದರ ಬೆನ್ನಲ್ಲೇ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಈ ಸಂಬಂಧ ಮಹತ್ವದ ಸಭೆ ನಡೆಸಿದರು ಮತ್ತು ಇದು ಚೀನಾ ಕಂಡ ಅತಿದೊಡ್ಡ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ತಿಳಿಸಿದ್ದಾರೆ.