ಶನಿವಾರ, 22 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಪ್ರಥಮ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ ಭುವನೇಶ್ವರದಲ್ಲಿ ನಡೆಯಲಿದೆ
Authored by:
Basavaraj Halli
ಮೊದಲ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ ಒಡಿಶಾ ರಾಜ್ಯದ ರಾಜಧಾನಿ ಭುವನೇಶ್ವರದಲ್ಲಿ ನಡೆಯಲಿದೆ. ಈ ಕ್ರೀಡಾಕೂಟವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಿ ಮೋದಿ ಅವರು ಉದ್ಘಾಟಿಸಲಿದ್ದಾರೆ.
* ಈ ಕ್ರೀಡಾ ಕೂಟವನ್ನು ಇದೆ ಮೊದಲಬಾರಿಗೆ ಆಯೋಜಿಸಲಾಗುತ್ತಿದ್ದು ಒಟ್ಟು 17 ವಿಭಾಗಗಳಲ್ಲಿ ಮತ್ತು 159 ವಿಶ್ವವಿದ್ಯಾಲಯಗಳಿಂದ 3,400 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
* 17 ಕ್ರೀಡೆಗಳನ್ನು ನಡೆಸಲು ಉದ್ದೇಶಿಸಲಾಗಿದ್ದು ಇದರಲ್ಲಿ ಅಥ್ಲೆಟಿಕ್ಸ್, ಬಿಲ್ಲುಗಾರಿಕೆ, ವೇಟ್ ಲಿಫ್ಟಿಂಗ್, ಈಜು, ಬ್ಯಾಡ್ಮಿಂಟನ್, ಹಾಕಿ, ಫುಟ್‌ಬಾಲ್, ಟೆನಿಸ್, ಟೇಬಲ್ ಟೆನಿಸ್, ಕುಸ್ತಿ, ಫೆನ್ಸಿಂಗ್, ಬಾಕ್ಸಿಂಗ್, ಹುಡೋ, ಬ್ಯಾಸ್ಕೆಟ್‌ಬಾಲ್, ರಗ್ಬಿ, ವಾಲಿ ಬಾಲ್, ಕಬಡ್ಡಿ ಕ್ರೀಡೆಗಳು ಸೇರಿವೆ.