ಶನಿವಾರ, 22 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಪಿ. ವಿ. ಸಿಂಧು ಮತ್ತು ಸೌರಭ್ ಚೌದರಿಗೆ "ವರ್ಷದ ಕ್ರೀಡಾಪಟು" ಪ್ರಶಸ್ತಿ
Authored by:
Basavaraj Halli
ನವದೆಹಲಿ : ESPN ಸಂಸ್ಥೆ ಕೊಡಮಾಡುವ “ESPN ವರ್ಷದ ಕ್ರೀಡಾಪಟು ಪ್ರಶಸ್ತಿ" ಗೆ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಮತ್ತು ಶೂಟರ್ ಸೌರಭ್ ಚೌಧರಿ ಆಯ್ಕೆಯಾಗಿದ್ದಾರೆ.
ಪಿ. ವಿ. ಸಿಂಧು ಅವರು ವಿಶ್ವ ಚಾಂಪಿಯನ್ ಪ್ರಶಸ್ತಿ ಗೆದ್ದಿರುವ ಭಾರತದ ಮೊದಲ ಬ್ಯಾಡ್ಮಿಟನ್ ಆಟಗಾರ್ತಿ ಮತ್ತು ಪುರುಷ ವಿಭಾಗದ ಶೂಟಿಂಗ್‌ನಲ್ಲಿ ಅಮೋಘ ಸಾಧನೆ ಮಾಡಿರುವುವ ಸೌರಭ್ ಚೌಧರಿ ಇವರಿಗೆ ESPN ಸಂಸ್ಥೆ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ನೀಡಿದೆ. ಇನ್ನುಳಿದಂತೆ ಹಲವು ಪ್ರಶಸ್ತಿಗಳನ್ನು ಸಂಸ್ಥೆಯು ನೀಡಿದ್ದು ವಿವರ ಈ ಕೆಳಗಿನಂತಿದೆ :
* ಅಥ್ಲಿಟ್ ದ್ಯುತಿ ಚಂದ್ ಅವರಿಗೆ “ಭಾರತದ ಧೈರ್ಯಶಾಲಿ’ ಪ್ರಶಸ್ತಿ
* ಚೆಸ್ ತಾರೆ ಕೊನೆರು ಹಂಪಿ ಅವರಿಗೆ “ಕಮ್‌ಬ್ಯಾಕ್ ಆಫ್ ಇಯರ್’ ಪ್ರಶಸ್ತಿ
* ಕುಸ್ತಿ ಪಟು ದೀಪಕ್ ರವರಿಗೆ “ವರ್ಷದ ಉದಯೋನ್ಮುಖ ತಾರೆ’ ಪ್ರಶಸ್ತಿ
* ಗೋಪಿಚಂದ್ “ವರ್ಷದ ಕೋಚ್’ ಪ್ರಶಸ್ತಿ
* ಶೂಟರ್ ಮನು ಭಾಕರ್ ಮತ್ತು ಸೌರಭ್ ಚೌಧರಿ ಜೋಡಿ “ವರ್ಷದ ತಂಡ’ ಪ್ರಶಸ್ತಿ