ಶುಕ್ರವಾರ, 21 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ವಿಶ್ವವ್ಯಾಪಿ ಶಿಕ್ಷಣದ ಭವಿಷ್ಯದ ಸೂಚ್ಯಂಕ: ಭಾರತ 35 ನೇ ಸ್ಥಾನಕ್ಕೆ ಏರಿಕೆ
Authored by:
Basavaraj Halli
ಆರ್ಥಿಕ ಗುಪ್ತಚರ ಘಟಕವು (Economic Intelligence Unit) 2019ರ ವಿಶ್ವವ್ಯಾಪಿ ಶಿಕ್ಷಣದ ಭವಿಷ್ಯದ ಸೂಚ್ಯಂಕವನ್ನು ಪ್ರಕಟಿಸಿದ್ದು ಭಾರತವು ಒಟ್ಟಾರೆ 53 ಅಂಕಗಳೊಂದಿಗೆ ಪ್ರಸ್ತುತ 35 ನೇ ಸ್ಥಾನವನ್ನು ಪಡೆದಿದೆ.
ತಮ್ಮ ವಿದ್ಯಾರ್ಥಿಗಳ ಕೌಶಲ್ಯ ಸಾಮರ್ಥ್ಯ ಉತ್ತೇಜಿಸುವ ಆಧಾರದ ಮೇಲೆ ದೇಶಗಳಿಗೆ ಈ ಶ್ರೇಯಾಂಕವನ್ನು ನೀಡಲಾಗುತ್ತದೆ. ಬೋಧನೆ, ನೀತಿ ಪರಿಸರ ಮತ್ತು ಬೋಧನಾ ವಾತಾವರಣ ಎಂಬ ಮೂರು ವಿಷಯಗಳ ಮೇಲೆ ಅಂಕಗಳನ್ನು ನೀಡಲಾಗುತ್ತದೆ. 2018 ರಲ್ಲಿ ಭಾರತ 41 ಅಂಕಗಳೊಂದಿಗೆ 40 ನೇ ಸ್ಥಾನದಲ್ಲಿತ್ತು ಈ ವರ್ಷ 5 ಸ್ಥಾನ ಏರಿಕೆ ಕಂಡು 35 ನೇ ಕ್ರಮಾಂಕವನ್ನು ಪಡೆದಿದೆ.