ಶುಕ್ರವಾರ, 21 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ವಾಯು ಮಾಲಿನ್ಯ ನಿಯಂತ್ರಿಸಲು ಏ. 01 ರಿಂದ ಶುದ್ಧ ಪೆಟ್ರೋಲ್ ಮತ್ತು ಡೀಸೆಲ್ನ ಮಾರಾಟ
Authored by:
Basavaraj Halli
ವಾಯು ಮಾಲಿನ್ಯವನ್ನು ನಿಯಂತ್ರಿಸಲು ಭಾರತದಲ್ಲಿಯೂ ಕೂಡ ಏಪ್ರಿಲ್ 1ರಿಂದ ವಿಶ್ವದ ಅತ್ಯಂತ ಶುದ್ಧ ಪೆಟ್ರೋಲ್ ಮತ್ತು ಡೀಸೆಲ್ನ ಬಳಕೆ ಆರಂಭಿಸಲಿದೆ. ಗ್ರಾಹಕರು ಪ್ರತಿ ಲೀಟರ್ ತೈಲದ ಮೇಲೆ ಸುಮಾರು 50 ಪೈಸೆಯಿಂದ 1 ರೂಪಾಯಿ ವರೆಗೆ ಹೆಚ್ಚು ಹಣ ಪಾವತಿಸಬೇಕಾಗಬಹುದು.
ಎಲ್ಲ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು EURO-6 ದರ್ಜೆಯ ಪೆಟ್ರೋಲ್ ಮತ್ತು ಡೀಸೆಲನ್ನು ಬಳಕೆದಾರರಿಗೆ ಪೂರೈಸಲು ಸಜ್ಜಾಗಿವೆ. EURO-6 ದರ್ಜೆಯ ಪೆಟ್ರೋಲ್ ಮತ್ತು ಡೀಸೆಲ ಬಳಕೆಯಿಂದ ವಾಯು ಮಾಲಿನ್ಯವನ್ನು ತಕ್ಕ ಮಟ್ಟಿಗೆ ನಿಯಂತ್ರಿಸಬಹುದಾಗಿದೆ.