ಶುಕ್ರವಾರ, 21 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಏಷ್ಯನ್ ಕುಸ್ತಿ: ಎರಡನೇ ದಿನ ಮತ್ತೆ ಭಾರತಕ್ಕೆ ಮೂರು ಕಂಚು
Authored by:
Basavaraj Halli
ದೆಹಲಿಯಲ್ಲಿ ನಡೆದ ಏಷ್ಯನ್ ಕುಸ್ತಿ ಚಾಂಪಿಯನಶೀಪ್ ನ 2ನೇ ದಿನ ಭಾರತದ ಸ್ಪರ್ಧಿಗಳು ಭಾಗವಹಿಸಿ ಒಟ್ಟು 3 ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
* ಅಶು ಅವರು 67 ಕೆ ಜಿ ವಿಭಾಗದಲ್ಲಿ ಸಿರಿಯಾದ ಅಬ್ದುಲ್ಕರೀಮ್ ಮೊಹಮ್ಮದ್ ಅಲ್-ಹಸನ್ ಅವರನ್ನು 8-1
ಗೋಲುಗಳಿಂದ ಸೋಲಿಸಿ ಕಂಚಿನ ಪದಕ ಪಡೆದರು.
* ಆದಿತ್ಯ ಕುಂಡು ಅವರು 72 ಕೆ ಜಿ ವಿಭಾಗದಲ್ಲಿ ಜಪಾನ್ ನ ನವೊ ಕುಸಕಾ ಅವರನ್ನು 8-0 ಗೋಲುಗಳಿಂದ
ಸೋಲಿಸಿ ಕಂಚಿನ ಪದಕ ಪಡೆದರು.
*ಹರ್ದೀಪ್ ಅವರು 97 ಕೆ ಜಿ ವಿಭಾಗದಲ್ಲಿ ಕಿರ್ಗಿಸ್ತಾನ್‌ನ ಸ್ಪರ್ಧಿಯ ಎದುರು 3-1 ಅಂತರದಿಂದ ಸೋಲಿಸಿ ಕಂಚಿನ ಪದಕ ಪಡೆದರು.