ಗುರುವಾರ, 20 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಟೈಮ್ಸ್ ಉನ್ನತ ಶಿಕ್ಷಣ ಶ್ರೇಯಾಂಕದಲ್ಲಿ IISc ಗೆ 16 ನೇ ಸ್ಥಾನ
Authored by:
Basavaraj Halli
ಟೈಮ್ಸ್ ಉನ್ನತ ಶಿಕ್ಷಣ ಶ್ರೇಯಾಂಕವನ್ನು ಲಂಡನ್‌ನಲ್ಲಿ ಇತ್ತೀಚಿಗೆ ಬಿಡುಗಡೆ ಮಾಡಲಾಯಿತು. ಈ ಶ್ರೇಯಾಂಕದ ವರದಿ ಅನುಸಾರ ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯು 16 ನೇ ಸ್ಥಾನವನ್ನು ಪಡೆದಿದೆ. ಈ ಶ್ರೇಯಾಂಕವನ್ನು "ದಿ ಎಮರ್ಜಿಂಗ್ ಎಕಾನಮೀಸ್ ಯೂನಿವರ್ಸಿಟಿ ರ್ಯಾಂಕಿಂಗ್ 2020" (The Emerging Economies University Ranking 2020) ಎಂದು ಹೆಸರಿಸಲಾಯಿತು.
* ಈ ವರದಿ ಅನುಸಾರ ಮೊದಲ 100 ರ್ಯಾಂಕುಗಳಲ್ಲಿ ಸುಮಾರು 11 ಭಾರತೀಯ ವಿಶ್ವವಿದ್ಯಾಲಯಗಳನ್ನು ಸ್ಥಾನಪಡೆದಿವೆ.
* ಒಟ್ಟು ವಿಶ್ವದ 47 ದೇಶಗಳ 533 ವಿಶ್ವವಿದ್ಯಾಲಯಗಳು ಈ ಶ್ರೇಯಾಂಕ ಪಟ್ಟಿಯಲ್ಲಿದ್ದು ಈ ಪೈಕಿ ಭಾರತೀಯ 56 ವಿಶ್ವವಿದ್ಯಾಲಯಗಳು ಶ್ರೇಯಾಂಕದಲ್ಲಿ ಸ್ಥಾನ ಪಡೆದಿವೆ.