ವಾಷಿಂಗ್ಟನ್‌: ಅಮೆರಿಕದ ಸುಪ್ರೀಂ ಕೋರ್ಟ್‌ ನಂತರ ಪ್ರಬಲ ನ್ಯಾಯಾಲಯವೆಂದೇ ಪರಿಗಣಿಸಲ್ಪಟ್ಟಿರುವ ಫೆಡರಲ್‌ ಸರ್ಕೀಟ್‌ ಕೋರ್ಟ್‌ನ ಮುಖ್ಯ ನ್ಯಾಯಮುರ್ತಿಯಾಗಿ ಭಾರತ ಮೂಲದ ಶ್ರೀನಿವಾಸನ್‌ ಅವರು ಆಯ್ಕೆಯಾಗಿದ್ದಾರೆ. ಈ ಕೋರ್ಟ್ ಅಮೆರಿಕಾದ ಸುಪ್ರೀಂ ಕೋರ್ಟ್ ನ ನಂತರದ ಸ್ಥಾನವನ್ನು ಹೊಂದಿದೆ. ಶ್ರೀನಿವಾಸನ್ ಅವರು ಅಮೆರಿಕದ ನ್ಯಾಯಾಲಯಗಳಲ್ಲಿ ದೊಡ್ಡ ಹುದ್ದೆ ಅಲಂಕರಿಸಿದ ಮೊದಲ ಭಾರತೀಯರೆನಿಸಿದ್ದಾರೆ. ಇವರು ಅಮೆರಿಕದ ಅಪೀಲುಗಳ ಡಿಸಿ ಸರ್ಕೀಟ್‌ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿದ್ದಾರೆ.