ಬುಧವಾರ, 19 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಕನ್ನಡದ ಹಿರಿಯ ನಟಿ ಕಿಶೋರಿ ಬಲ್ಲಾಳ್ ವಿಧಿವಶ
Authored by:
Basavaraj Halli
ಕನ್ನಡದ ಖ್ಯಾತ ಹಿರಿಯ ನಟಿ ಕಿಶೋರಿ ಬಲ್ಲಾಳ್ ಅವರು ವಿಧಿವಶರಾದರು. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ನಟಿ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ.
ಕಿಶೋರಿ ಬಲ್ಲಾಳ್ ಅವರು ಮೂಲತಃ ರಂಗಭೂಮಿ ಕಲಾವಿದೆಯಾಗಿದ್ದರು ನಂತರ ಸಿನಿಮಾ, ಜಾಹೀರಾತುಗಳಲ್ಲಿ ಅಭಿನಯಿಸಿ ಖ್ಯಾತಿ ಪಡೆದಿದ್ದರು
* ಕಿಶೋರಿ ಬಲ್ಲಾಳ್ ಅವರ ಮೊದಲ ಚಿತ್ರ: 'ಇವಳೆಂಥಾ ಹೆಂಡತಿ' (1960)
* ಇವರು ಸುಮಾರು 75ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.
* ಹಿಂದಿಯಲ್ಲಿ ಶಾರೂಖ್ ಜೊತೆ 'ಸ್ವದೇಶ್' ಚಿತ್ರದಲ್ಲಿ ಕೂಡ ನಟಿಸಿ ಅಪಾರ ಮನ್ನಣೆಗೆ ಪಾತ್ರವಾಗಿದ್ದರು.