ಬುಧವಾರ, 19 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಜಗತ್ತಿನ 5ನೇ ಅತಿದೊಡ್ಡ ಅರ್ಥವ್ಯವಸ್ಥೆಯಾಗಿ ಹೊರಹುಮ್ಮಿದ ಭಾರತ
Authored by:
Basavaraj Halli
2019 ನೇ ಸಾಲಿನ ಬ್ರಿಟನ್ ಮತ್ತು ಫ್ರಾನ್ಸ್ ದೇಶಗಳ ಆರ್ಥಿಕತೆಗಳನ್ನು ಹಿಂದಿಕ್ಕಿದ ಭಾರತವು ಪ್ರಸ್ತುತ ಜಗತ್ತಿನ 5ನೇ ಅತಿದೊಡ್ಡ ಅರ್ಥವ್ಯವಸ್ಥೆಯಾಗಿ ಹೊರಹೊಮ್ಮಿದೆ.
ಬ್ರಿಟನ್ ಅರ್ಥ ವ್ಯವಸ್ಥೆ 2.83 ಲಕ್ಷ ಕೋಟಿ ಡಾಲರ್ ಮತ್ತು ಫ್ರಾನ್ಸ್ ನದ್ದು 2.71 ಲಕ್ಷ ಕೋಟಿ ಡಾಲರ್, ಈ ಎರಡು ದೇಶಗಳನ್ನು ಹಿಂದಿಕ್ಕಿರುವ ಭಾರತದ ಅರ್ಥ ವ್ಯವಸ್ಥೆ ಸುಮಾರು 2.94 ಲಕ್ಷ ಕೋಟಿ ಡಾಲರ್ ಆಗಿದೆ ಎಂದು ಅಮೆರಿಕಾದ ಥಿಂಕ್ ಟ್ಯಾಂಕ್ ವರ್ಲ್ಡ್ ಪಾಪ್ಯುಲೇಷನ್ ರಿವ್ಯೂ ತನ್ನ ವರದಿಯಲ್ಲಿ ತಿಳಿಸಿದೆ.
ಭಾರತವು ಹಳೆಯ ನೀತಿಗಳನ್ನು ಬದಲಿಸಿ ಮುಕ್ತ ಮಾರುಕಟ್ಟೆಗೆ ಅವಕಾಶ ಮಾಡಿಕೊಟ್ಟಿದೆ ಈ ಬದಲಾವಣೆಗೆ ಪ್ರಮುಖ ಕಾರಣವೆಂದು ವರದಿಯಲ್ಲಿ ತಿಳಿಸಲಾಗಿದೆ.