ಸೋಮವಾರ, 17 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಇಸ್ರೋ 2019 20 ರ ವಾರ್ಷಿಕ ವರದಿ ಪ್ರಕಟ : ಹಲವು ಉಪಗ್ರಹಗಳ ಉಡಾವಣೆಗೆ ಯೋಜನೆ
Authored by:
Basavaraj Halli
ದಿನಾಂಕ ಫೆಬ್ರುವರಿ 15, 2020 ರಂದು, ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) ತನ್ನ 2019 - 2020 ರ ವಾರ್ಷಿಕ ವರದಿಯನ್ನು ಪ್ರಕಟಿಸಿತು, ಈ ವರದಿಯ ಪ್ರಕಾರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ 2020-21 ರಲ್ಲಿ ಒಟ್ಟು 10 ಭೂ-ವೀಕ್ಷಣಾ ಉಪಗ್ರಹಗಳನ್ನು ಉಡಾಯಿಸಲಿದೆ. ಇದು ಜಿಯೋ ಇಮೇಜಿಂಗ್ ಉಪಗ್ರಹ ಮತ್ತು ಜಿ ಸಾಟ್-1 ಉಪಗ್ರಹಗಳನ್ನು ಒಳಗೊಂಡಿದೆ. * ಈ ವಾರ್ಷಿಕ ವರದಿ ಪ್ರಕಾರ ಒಟ್ಟು 18 ಸಂವಹನ (Communication) ಉಪಗ್ರಹಗಳು, 19 ರಾಷ್ಟ್ರೀಯ ಭೂ ವೀಕ್ಷಣಾ ಉಪಗ್ರಹಗಳು ಮತ್ತು 8 ಸಂಚರಣೆ (Navigation) ಉಪಗ್ರಹಗಳು ಸೇವೆಯಲ್ಲಿವೆ. * ಈ ಪೈಕಿ 3 ಸಂವಹನ ಉಪಗ್ರಹಗಳು ಮಿಲಿಟರಿ ಸಂವಹನಕ್ಕಾಗಿ ಮೀಸಲಾಗಿವೆ.