ಮಂಗಳವಾರ, 11 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ವಲಸೆ ಪ್ರಭೇದಗಳ ಸಂರಕ್ಷಣೆಯ 13 ನೇ ಸಮಾವೇಶವನ್ನು ಪ್ರಧಾನಿ ಮೋದಿ ಉದ್ಘಾಟಿಸಿಲಿದ್ದಾರೆ
Authored by:
Basavaraj Halli
ಕಾಡು ಪ್ರಾಣಿಗಳ ವಲಸೆ ಪ್ರಭೇದಗಳ ಸಂರಕ್ಷಣೆಯ 13 ನೇ ಸಮಾವೇಶವು (Conference of Parties) ಭಾರತದಲ್ಲಿ ಫೆಬ್ರವರಿ 17, 2020 ರಿಂದ ಫೆಬ್ರವರಿ 22, 2020ರ ವರೆಗೆ ನಡೆಯಲಿದೆ. ಈ ಸಮ್ಮೇಳನವನ್ನು ಸಂಕ್ಷಿಪ್ತವಾಗಿ CMS-COP-13 ಎಂದು ಕರೆಯಲಾಗುತ್ತದೆ. ಸಮ್ಮೇಳನವನ್ನು ಭಾರತದ ಸರಕಾರದ ಪರವಾಗಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಆಯೋಜಿಸಲಿದೆ.
* ಮುಂದಿನ 3 ವರ್ಷಗಳ ಕಾಲ ಭಾರತವನ್ನು ಈ ಸಮ್ಮೇಳನದ ಅಧ್ಯಕ್ಷರನ್ನಾಗಿ ಈಗಾಗಲೇ ನೇಮಿಸಲಾಗಿದೆ.
* ಈ ಸಮ್ಮೇಳನದಲ್ಲಿ ಒಟ್ಟು 130 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
* ಸಮ್ಮೇಳನದ ವಿಷಯ(Theme) : Migratory species Connect the Planet and we welcome them (ವಲಸೆ ಪ್ರಭೇದಗಳು ಗ್ರಹಗಳನ್ನು ಸಂಪರ್ಕಿಸುತ್ತವೆ ಮತ್ತು ನಾವು ಅವುಗಳನ್ನು ಸ್ವಾಗತಿಸೋಣ)