DefExpo: ಭಾರತ ಮತ್ತು ಯುಕೆ ಮಧ್ಯೆ ರಕ್ಷಣಾ ಮತ್ತು ಏರೋಸ್ಪೇಸ್ ಸಂಬಂಧಗಳನ್ನು ಬಲಪಡಿಸಲು ಒಪ್ಪಂದಕ್ಕೆ ಸಹಿ
Published by Basavaraj Halli
10 ಫೆಬ್ರವರಿ 2020
ಭಾರತೀಯ ರಕ್ಷಣಾ ತಯಾರಕರ ಸಮಾಜ (Society of Indian Defence Manufacturers) ಯುಕೆ ಭಾರತ ವ್ಯಾಪಾರ ಮಂತ್ರಾಲೋಚನೆ ಸಭೆ (UK India Business Council) ದೇಶಗಳ ನಡುವೆ ರಕ್ಷಣಾ ಸಂಬಂಧಗಳನ್ನು ಹೆಚ್ಚಿಸಲು ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದವು. ಲಕ್ನೋದಲ್ಲಿ ನಡೆಯುತ್ತಿರುವ ಡೆಫ್ಎಕ್ಸ್ಪೋದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.
*ಏರೋಸ್ಪೇಸ್ ಮತ್ತು ದೇಶಗಳ ರಕ್ಷಣಾ ವಲಯದ ನಡುವೆ ಸಹಭಾಗಿತ್ವವನ್ನು ಬೆಳೆಸಲು ಒಪ್ಪಂದಕ್ಕೆ ಸಹಿ
ಹಾಕಲಾಯಿತು.
*ಇದು ದೇಶಗಳ ನಡುವೆ ತಂತ್ರಜ್ಞಾನಗಳ ವರ್ಗಾವಣೆಗೆ ಸಹಕಾರಿಯಾಗಲಿದೆ.
*ಬಲವಾದ ಆರ್ಥಿಕ ಮತ್ತು ಕೈಗಾರಿಕಾ ಸಹಕಾರವನ್ನು ರೂಪಿಸಲು ಎರಡೂ ದೇಶಗಳ ರಕ್ಷಣಾ ಕೈಗಾರಿಕೆಗಳು ಒಟ್ಟಾಗಿ
ಕೆಲಸ ಮಾಡುತ್ತವೆ.