ಗುರುವಾರ, 30 ಜನವರಿ 2020
5:30 ಪೂರ್ವಾಹ್ನ
Daily PDF
ಗುಜರಾತ್‍ನ ಅಹಮದಾಬಾದ್‍ನಲ್ಲಿ ನಡೆಯಲಿದೆ "ಹೌಡಿ ಟ್ರಂಪ್" ರ‍್ಯಾಲಿ
Authored by:
Siddaram Halli
ಅಮೆರಿಕ ಅಧ್ಯಕ್ಷರು ಆದಂತಹ ಡೊನಾಲ್ಡ್ ಟ್ರಂಪ್ ಅವರು ಫೆ.21 ರಿಂದ 24ರವರೆಗೆ ಭಾರತದ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ಗುಜರಾತ್‍ನ ಅಹಮದಾಬಾದ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಅವರು ವಿಶೇಷ ಸಾರ್ವಜನಿಕ ರ‍್ಯಾಲಿ (ಹೌಡಿ ಟ್ರಂಪ್) ಯಲ್ಲಿ ಭಾಗವಹಿಸಲಿದ್ದಾರೆ.
ಭಾರತ ಮತ್ತು ಅಮೆರಿಕ ನಡುವೆ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಬಾಂಧವ್ಯ ಬಲವರ್ಧನೆ ಕುರಿತು ಮಹತ್ವದ ಮಾತುಕತೆ ನಡೆಯುತ್ತದೆ. ಕೆಲವು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯು ಇದೆ. ದೆಹಲಿಯ ಐಟಿಸಿ ಮೌರ್ಯ ಸಪ್ತ ತಾರಾ ಹೊಟೇಲ್‍ನಲ್ಲಿ ಈಗಾಗಲೇ ಡೊನಾಲ್ಡ್ ಟ್ರಂಪ್ ಮತ್ತು ಅವರ ನೇತೃತ್ವ ನಿಯೋಗ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಳ್ಳಾಗುತ್ತಿದೆ.