ಲಾಸ್‌ ಏಂಜಲ್ಸ್‌: ನಿವೃತ್ತರಾಗಿದ್ದ ಅಮೆರಿಕದ ನ್ಯಾಷನಲ್‌ ಬ್ಯಾಸ್ಕೆಟ್‌ಬಾಲ್‌ ಅಸೋಸಿಯೇಷನ್‌ (ಎನ್‌ಬಿಎ) ತಾರೆ ಕೋಬಿ ಬ್ರಯಾಂಟ್‌ (41) ಇಲ್ಲಿನ ಕಾಲಿಫೋರ್ನಿಯಾದ ಕ್ಯಾಲಬಾಸಸ್‌ ಬಳಿ ಸಂಭವಿಸಿದ ಹೆಲಿಕಾಪ್ಟರ್‌ ಪತನಗೊಂಡು ಮೃತಪಟ್ಟಿದ್ದಾರೆ. ಲಾಸ್‌ ಏಂಜಲಿಸ್‌ ಲೇಕರ್ಸ್‌ ತಂಡಕ್ಕೆ ಆಡುತ್ತಿದ್ದ ಬ್ರಯಾಂಟ್‌ 2016ರಲ್ಲಿ ನಿವೃತ್ತರಾಗಿದ್ದರು. ವೃತ್ತಿ ಜೀವನದ 20 ವರ್ಷವೂ ಒಂದೇ ತಂಡಕ್ಕೆ ಆಡಿದ್ದರು. ಅವರು ಗಳಿಸಿದ್ದು 33,643 ಪಾಯಿಂಟ್ಸ್‌