ಸೋಮವಾರ, 27 ಜನವರಿ 2020
5:30 ಪೂರ್ವಾಹ್ನ
Daily PDF
ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ಮಿಂಚಿದ ಕರ್ನಾಟಕದ ಅನುಭವ ಮಂಟಪ ಸ್ಥಬ್ತಚಿತ್ರ
Authored by:
Surekha Halli
ನವದೆಹಲಿ : 71ನೇ ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತ್ರಿವರ್ಣ ಧ್ವಜಾರೋಹಣವನ್ನು ನೆರವೇರಿಸಿ ಪರೇಡ್ ಗೆ ಚಾಲನೆ ನೀಡಿದರು.
ರಾಷ್ಟ್ರಪತಿ ಭವನದ ಮುಂಭಾಗದ ರಾಜಪಥ್ ದಲ್ಲಿ ಗಣರಾಜ್ಯೋತ್ಸವ ವಿಶೇಷ ಪರೇಡ್ ನಡೆಯುತ್ತಿದ್ದು, ಕರ್ನಾಟಕದ ಬಸವಣ್ಣನ ಮೂರ್ತಿ ಜೊತೆಗೆ ಅನುಭವ ಮಂಟಪ ಸ್ಥಬ್ತಚಿತ್ರ ಪಾಲ್ಗೊಂಡಿದ್ದು, ಗಮನ ಸೆಳೆಯುತ್ತಿದೆ.
ಕಾರ್ಯಕ್ರಮದಲ್ಲಿ ಬ್ರಿಜೆಲ್ ಅಧ್ಯಕ್ಷ ಜೈರ್ ಮೆಸ್ಸಿಯಾನ್ ಬೊಲ್ಸೆನಾರೋ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
ಇದೆ ಮೊದಲ ಬಾರಿ ಪ್ರಧಾನಿ ಮೋದಿ ಅಮರ್ ಜವಾನ್ ಜ್ಯೋತಿ ಬದಲು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ, ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು.