ಸೋಮವಾರ, 27 ಜನವರಿ 2020
5:30 ಪೂರ್ವಾಹ್ನ
Daily PDF
ಮಧ್ಯಸ್ಥಿಕೆ ವಹಿಸಲು ಸಿದ್ಧ: ನೇಪಾಳ
Authored by:
Surekha Halli
ಕಠ್ಮಂಡು: ಭಾರತದ ಮತ್ತು ಪಾಕಿಸ್ತಾನ ನಡುವಿನ ಭಿನ್ನಾಭಿಪ್ರಾಯವನ್ನು ಶಮನ ಮಾಡಲು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ನೇಪಾಳ ತಿಳಿಸಿದೆ.
ಉಭಯ ದೇಶಗಳು ಮಾತುಕತೆ ಮೂಲಕ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಳ್ಳಲು ಆದ್ಯತೆ ನೀಡಬೇಕು ಎಂದು ಅದು ಸಲಹೆ ನೀಡಿದೆ.
'ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಮಾತುಕತೆ ಉತ್ತಮ ಮಾರ್ಗವಾಗಿದೆ. ಅಗತ್ಯ ಬಿದ್ದರೆ ಮಾತುಕತೆಗೆ ನಾವು ಮಧ್ಯಸ್ಥಿಕೆ ವಹಿಸುತ್ತೇವೆ. ಆದರೆ, ಭಾರತ ಮತ್ತು ಪಾಕಿಸ್ತಾನ ನೇರ ಮಾತುಕತೆ ನಡೆಸಿದರೆ ಹೆಚ್ಚು ಉತ್ತಮ' ಎಂದು ನೇಪಾಳ ಅಭಿಪ್ರಾಯಪಟ್ಟಿದೆ.