ರವಿವಾರ, 26 ಜನವರಿ 2020
5:30 ಪೂರ್ವಾಹ್ನ
Daily PDF
ಗಣರಾಜ್ಯೋತ್ಸವ:6 ವೀರ ಯೋಧರಿಗೆ ಶೌರ್ಯ ಚಕ್ರ, 32 ಯೋಧರಿಗೆ ಅತಿ ವಿಶಿಷ್ಟ ಸೇವಾ ಪದಕ ಪ್ರಶಸ್ತಿ
Authored by:
Surekha Halli
ನವದೆಹಲಿ: 71ನೇ ಗಣರಾಜ್ಯೋತ್ಸವ ದಿನಾಚರಣೆಯಂದು ಆರು ಮಂದಿ ಸೇನಾ ಯೋಧರಿಗೆ ಶೌರ್ಯ ಚಕ್ರ ಪ್ರಶಸ್ತಿ ಭಾಜನರಾದವರ ಹೆಸರನ್ನು ಕೇಂದ್ರ ಸರ್ಕಾರ ಶನಿವಾರ ಘೋಷಿಸಿದೆ. ಲೆಫ್ಟಿನೆಂಟ್ ಕರ್ನಲ್ ಜ್ಯೋತಿ ಲಾಮಾ, ಮೇಜರ್ ಬಿಜೇಂದ್ರ ಸಿಂಗ್, ನಯಿಬ್ ಸುಬೇದಾರ್ ನರೇಂದ್ರ ಸಿಂಗ್, ಲೇಟ್ ನಯಿಬ್ ಸುಬೇದಾರ್ ನಾಯಕ್ ನರೇಶ್ ಕುಮಾ, ಕರ್ಮಾಡೆಯೋ ಸೇರಿದಂತೆ ಆರು ಯೋಧರು ಶೌರ್ಯ ಪ್ರಶಸ್ತಿ ಪಡೆಯಲಿದ್ದಾರೆ ಎಂದು ವರದಿ ತಿಳಿಸಿದೆ.
ಈ ಬಾರಿ ಗಣರಾಜ್ಯೋತ್ಸವದಲ್ಲಿ ಹತ್ತು ಪರಮ್ ವಿಶಿಷ್ಟ ಸೇವಾ ಪದಕ, 32 ಅತಿ ವಿಶಿಷ್ಟ ಸೇವಾ ಪದಕ, 8 ಯುದಾ ಸೇವಾ ಪದಕ (ವೈಎಸ್ ಎಂ) ಸೇರಿದಂತೆ ಒಟ್ಟು 151 ಸೇನಾ ಪದಕಗಳನ್ನು ಕೇಂದ್ರ ಘೋಷಿಸಿದೆ.