ಬುಧವಾರ, 22 ಜನವರಿ 2020
5:30 ಪೂರ್ವಾಹ್ನ
Daily PDF
ಇಂಟರ್ನೆಟ್ ಭಾರತ 2ನೇ ಅತೀ ದೊಡ್ಡ ರಾಷ್ಟ್ರ
Authored by:
Basavaraj Halli
ನಮ್ಮ ದೇಶದಲ್ಲಿ ಅಂತರ್ಜಾಲ ಬಳಕೆ ಈಗ ಜೀವನದ ಅವಿಭಾಜ್ಯ ಅಂಗವಾಗಿದೆ. ಮಾತ್ರವಲ್ಲದೇ ಮೂಲ ಆವಶ್ಯಕತೆಯಾಗಿ ಮಾರ್ಪಡುತ್ತಿದೆ. ದಿನನಿತ್ಯ ಅಂತರ್ಜಾಲ ಬಳಕೆದಾರರ ಸಂಖ್ಯೆ ವೇಗವಾಗಿ ಬೆಳೆಯುತ್ತಿದೆ. ಭಾರತದಲ್ಲಿ ಇಂಟರ್‌ನೆಟ್ ಬಳಕೆದಾರರ ಸಂಖ್ಯೆ 50 ಕೋಟಿ ದಾಟಿದೆ.
ಅತೀ ದೊಡ್ಡ ಮಾರುಕಟ್ಟೆ :
ಇತ್ತೀಚಿನ ವರ್ಷಗಳಲ್ಲಿ ಭಾರತದ ಆನ್‌ಲೈನ್ ಮಾರುಕಟ್ಟೆ ಹೆಮ್ಮರವಾಗಿ ಬೆಳೆ ಯುತ್ತಿದೆ. ಚೀನದ ಬಳಿಕ ಭಾರತ ಇದ್ದು, ಜಗತ್ತಿನ 2ನೇ ಅತೀ ದೊಡ್ಡ ರಾಷ್ಟ್ರ. ಅಮೆರಿಕಕ್ಕಿಂತ ದುಪ್ಪಟ್ಟು ಭಾರತದ ಒಟ್ಟು ಇಂಟರ್ನೆಟ್ ಬಳಕೆದಾರರು ಅಮೆರಿಕಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ. ಅಮೆರಿಕದಲ್ಲಿ ಸುಮಾರು 31 ಕೋಟಿಯಷ್ಟು ಎಂದು ಅಂದಾಜಿಸಲಾಗುತ್ತಿದೆ.